ಸಂಜೆಯ ಹೆಲ್ತ್ ಬುಲೆಟಿನ್: ಜಿಲ್ಲಾವಾರು ಸೋಂಕಿತರ ಲಿಸ್ಟ್ ಇಲ್ಲಿದೆ

495

ಬೆಂಗಳೂರು: ದಿನದಿಂದ ದಿನಕ್ಕೆ ವ್ಯಾಪಿಸ್ತಿರುವ ಕರೋನಾ ವೈರಸ್ ಕುರಿತು, ದಿನದಲ್ಲಿ ಎರಡು ಬಾರಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವ ಮೂಲಕ, ಪ್ರತಿಯೊಂದು ವರದಿಯನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುತ್ತೆ. ಅದರಂತೆ ಸಂಜೆಯ ಹೆಲ್ತ್ ಬಿಲೆಟಿನ್ ಬಿಡುಗಡೆಯಾಗಿದ್ದು, ಒಟ್ಟು 15 ಹೊಸ ಕೇಸ್ ಗಳು ಇಂದು ದಾಖಲಾಗಿವೆ.

ಮಧ್ಯಾಹ್ನ ರಿಲೀಸ್ ಮಾಡಿದ ಬುಲೆಟಿನ್ ನಲ್ಲಿಯೂ 15 ಕೇಸ್ ಗಳಿದ್ವು. ಈಗ್ಲೂ ಅಷ್ಟೆ ಕೇಸ್ ಗಳಿದ್ದು, ಒಂದಿಷ್ಟು ನೆಮ್ಮದಿ ತಂದಿದೆ. ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗಲಿ ಎಂದು ಪ್ರತಿಯೊಬ್ಬರು ಬೇಡಿಕೊಳ್ತಿದ್ದಾರೆ. ಹೀಗಾಗಿ ಮತ್ತೆ ಯಾವುದೇ ಸೋಂಕು ಪತ್ತೆಯಾಗದೆ ಇರೋದು ಖುಷಿಯ ವಿಚಾರ. ನೋವಿನ ಸಂಗತಿ ಅಂದ್ರೆ, ಹುಬ್ಬಳ್ಳಿ-ಧಾರವಾಡದಲ್ಲಿ ಪತ್ತೆಯಾದ ನಾಲ್ಕು ಕೇಸ್ ಗಳಲ್ಲಿ 3.6 ವರ್ಷದ ಗಂಡು ಮಗು, 5 ವರ್ಷದ ಗಂಡು ಹಾಗೂ 7 ವರ್ಷದ ಹೆಣ್ಣು ಮಗು ಇದೆ. ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ 8 ವರ್ಷದ ಹೆಣ್ಣು ಮಗುವಿನಲ್ಲಿ ಕೋವಿಡ್ 19 ಕಾಣಿಸಿಕೊಂಡಿರೋದು.

ಧಾರವಾಡದಲ್ಲಿ 4, ಮಂಡ್ಯ 3, ಬೆಳಗಾವಿ 3, ಬೀದರ 2, ಬಾಗಲಕೋಟೆ 1, ಬೆಂಗಳೂರು ನಗರ 1 ಹಾಗೂ ಗ್ರಾಮಾಂತರದಲ್ಲಿ 1 ಸೋಂಕು ಕಾಣಿಸಿಕೊಂಡಿದೆ. ಹೀಗೆ ಒಟ್ಟು 15 ಜನರಲ್ಲಿ ಕರೋನಾ ಪಾಸಿಟಿವ್ ಬಂದಿವೆ.

ಜಿಲ್ಲಾವಾರು ಕೋವಿಡ್ 19 ಪ್ರಕರಣಗಳು ಎಷ್ಟಿವೆ ಅನ್ನೋದು ಇಲ್ಲಿದೆ ನೋಡಿ.




Leave a Reply

Your email address will not be published. Required fields are marked *

error: Content is protected !!