ಚಂದ್ರಯಾನ-2 ನೇರ ವೀಕ್ಷಣೆ ಮಾಡೋದ್ಹೇಗೆ ಗೊತ್ತಾ?

478

ಬೆಂಗಳೂರು: ಬಾಹ್ಯಾಕಾಶದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಇಸ್ರೋ ಸಜ್ಜಾಗಿದೆ. ಸೆಪ್ಟೆಂಬರ್ 7ರಂದು ಇತಿಹಾಸ ನಿರ್ಮಿಸಲು ಇಸ್ರೋ ಸಕಲ ರೀತಿಯಿಂದ ಸಜ್ಜಾಗಿದೆ. ಈ ಮೂಲಕ ದಶಕದ ಕನಸು ನನಸಾಗುವ ಸಮಯ ಹತ್ತಿರವಾಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಸಹ ದೇಶದ ಜನರಿಗೆ ಮನವಿ ಮಾಡಿದ್ದಾರೆ.

ಇಸ್ರೋ ವಿಜ್ಞಾನಿಗಳ ಶಕ್ತಿ ಇಡೀ ವಿಶ್ವಕ್ಕೆ ತೋರಿಸುವ ಸಮಯ ಇದೀಗ ಬಂದಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ.

ಚಂದ್ರಯಾನ-2 ನೇರ ವೀಕ್ಷಣೆಗೆ ಏನು ಮಾಡಬೇಕು

ಇಸ್ರೋದ ಅಧಿಕೃತ ಯುಟೂಬ್ ಚಾನೆಲ್, ಟ್ವೀಟರ್ ಪೇಜ್, ಡಿಡಿ ನ್ಯಾಷನಲ್, ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಸೇರಿದಂತೆ ಟಿವಿ ಮಾಧ್ಯಮ ಸಂಸ್ಥೆಗಳು ನೇರ ಪ್ರಸಾರ ಮಾಡಲಿವೆ. ಈ ಎಲ್ಲ ಮಾಧ್ಯಮಗಳ ಮೂಲಕ ಐತಿಹಾಸಿಕ ಕ್ಷಣವನ್ನ ನೇರವಾಗಿ ಕಣ್ತುಂಬಿಕೊಳ್ಳಬಹುದು.

15 ನಿಮಿಷ ದಾಖಲೆಯ ಕ್ಷಣ

ಸೆಪ್ಟೆಂಬರ್ 7ರ ಬೆಳಗ್ಗೆ 1.40 ರಿಂದ 15 ನಿಮಿಷಗಳ ಅವಧಿ ಅತ್ಯಂತ ಮಹತ್ವದ್ದಾಗಿದೆ. ಈ ಟೈಂನಲ್ಲಿ ಚಂದ್ರನ ಮೇಲೆ ಲ್ಯಾಂಡ್ ಆಗುವುದನ್ನ ನೋಡುವ ಕ್ಷಣವಿದು. ಚಂದ್ರನ ಅಂಗಳದಲ್ಲಿನ ಗುರಾತ್ವಾಕರ್ಷಣೆ ಬಳಸಿಕೊಂಡು ಚಂದ್ರಯಾಯನ-2 ಲ್ಯಾಂಡ್ ಆಗುವುದನ್ನ ಪ್ರತಿಯೊಬ್ಬರು ನೋಡಬಹುದು.




Leave a Reply

Your email address will not be published. Required fields are marked *

error: Content is protected !!