ಸುಮಲತಾ ವರ್ಸಸ್ ಸುಮಲತಾ!

380

ಮಂಡ್ಯ: ಸಂಸದೆ ಸುಮಲತಾ ಅಂಬರೀಶ ಅವರಿಗೆ ಇದೀಗ ಮತ್ತೊಬ್ಬರು ಸಮಲತಾ ಸಿಕ್ಕಾಪಟ್ಟೆ ಕಾಟ ಕೊಡ್ತಿದ್ದಾರೆ. ಇದ್ರಿಂದ ಬೇಸತ ಅವರು ಸೈಬರ್ ಕ್ರೈಂ ಪೊಲೀಸ್ರಿಗೆ ದೂರು ಸಲ್ಲಿಸಿದ್ದಾರೆ. ಸಂಸದೆ ಸುಮಲತಾ ಅವರ ಹೆಸರಿನಲ್ಲಿ ನಕಲಿ ಖಾತೆ ತೆಗೆದು ಬೇಕಾಬಿಟ್ಟಿಯಾಗಿ ಪೋಸ್ಟ್ ಮಾಡಲಾಗ್ತಿದೆ.

ಮಾಜಿ ಸಚಿವ, ಶಾಸಕ ಡಿ.ಕೆ ಶಿವಕುಮಾರ ಬಂಧನವಾಗಿರುವುದಕ್ಕೆ ಪ್ರತಿಭಟನೆ ನಡೆಸಲಾಯ್ತು. ಇದನ್ನ ಪ್ರಶ್ನಿಸಿದ ಸುಮಲತಾ, ‘ನ್ಯಾಯದ ಮುಂದೆ ಎಲ್ಲರೂ ಒಂದೆ. ಅವರು ಮಾಡಿದ್ದು ಅವರು ಅನುಭವಿಸುತ್ತಾರೆ. ಇದಕ್ಕಾಗಿ ಸಾರ್ವಜನಿಕರ ಆಸ್ತಿ ಹಾಳು ಮಾಡುವುದು ಸರಿಯಿಲ್ಲ’ ಅನ್ನೋ ಪೋಸ್ಟ್ ಫೇಸ್ ಬುಕ್ ನಲ್ಲಿ ಹಾಕಲಾಗಿತ್ತು. ಆದ್ರೆ, ಅದು ಸಂಸದೆ ಸುಮಲತಾ ಅಂಬರೀಶ ಅವರ ಪೋಸ್ಟ್ ಅಲ್ಲ. ಅವರ ಹೆಸರಿನಲ್ಲಿ ಕ್ರಿಯೇಟ್ ಮಾಡಿರುವ ನಕಲಿ ಸುಮಲತಾ ಅಂಬರೀಶ ಅಕೌಂಟ್.

ನಕಲಿ ಅಕೌಂಟ್

ಈ ಹಿಂದೆ ಮೆಗಾಸ್ಟಾರ್ ಚಿರಂಜೀವಿ ಬರ್ಥ್ ಡೇ ಟೈಂನಲ್ಲಿ ಡ್ಯಾನ್ಸ್ ಮಾಡಿದ್ದಾರೆ ಎಂದು ಹಳೆ ವಿಡಿಯೋ ಹಾಕಿ, ಅವರಿಗೆ ಅವಮಾನ ಮಾಡುವ ಕೆಲಸ ಮಾಡಲಾಗಿತ್ತು. ಇದ್ರಿಂದ ಬೇಸತ್ತು ಇದೀಗ ಸೈಬರ್ ಕ್ರೈಂ ಪೊಲೀಸ್ರಿಗೆ ದೂರು ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!