ಮಾಲ್ಗುಡಿ ಡೇಸ್ ಟೀಸರ್ ಔಟ್

386

ನಟ ವಿಜಯರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಚಿತ್ರದ ಟೀಸರ್ ಔಟ್ ಆಗಿದೆ. ಆರ್.ಕೆ ನಾರಾಯಣ ಅವರ ಕೃತಿ ಹಾಗೂ ಶಂಕರನಾಗ ನಿರ್ದೇಶನದ ಧಾರವಾಹಿ ಮೂಲಕವೇ ಸಾಕಷ್ಟು ಸದ್ದು ಮಾಡಿದ ಟೈಟಲ್ ಇದು. ಇದೀಗ ಸಿನ್ಮಾ ಆಗ್ತಿದೆ.

ಬಾಲ ನಟನೆಯಲ್ಲಿಯೇ ಪ್ರಯೋಗಾತ್ಮ ಚಿತ್ರಗಳಲ್ಲಿ ನಟಿಸಿಕೊಂಡು ಬರ್ತಿರುವ ನಟ ವಿಜಯರಾಘವೇಂದ್ರ ಮತ್ತೊಮ್ಮೆ ತಮ್ಮನ್ನ ಪ್ರಯೋಗಕ್ಕೆ ಒಳಪಡಿಸಿಕೊಂಡಿದ್ದಾರೆ. 60 ವರ್ಷದ ವೃದ್ಧನ ಪಾತ್ರವನ್ನ ಅವರು ಮಾಡಿದ್ದಾರೆ. ಶಂಕರನಾಗ ನಿರ್ದೇಶನ ಮಾಡಿದ ಮಾಲ್ಗುಡಿ ಡೇಸ್ ಧಾರವಾಹಿಗೂ ಈ ಚಿತ್ರದ ಕಥೆಗೂ ಯಾವುದೇ ಸಂಬಂಧವಿಲ್ಲವೆಂದು ನಿರ್ದೇಶಕ ಕಿಶೋರ ಮೂಡಬಿದ್ರೆ ಸ್ಪಷ್ಟಪಡಿಸಿದ್ದಾರೆ.

ಕೇರಳದ ರೋಷನ್ ಎಂಬುವವರು ನಟ ವಿಜಯರಾಘವೇಂದ್ರಗೆ ಮೇಕಪ್ ಮಾಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ರತ್ನಾಕರ ಕಾಮತ್ ನಿರ್ಮಾಣದ ಚಿತ್ರದಲ್ಲಿ ಚಿನ್ನಾರಿ ಮುತ್ತುಗೆ ನಟಿ ಗ್ರೀಷ್ಮಾ ಶ್ರೀಧರ ಜೋಡಿಯಾಗಿದ್ದಾರೆ. ಇದಕ್ಕೆ ಉದಯಲೀಲಾ ಅವರ ಕ್ಯಾಮೆರಾ ವರ್ಕ್ ಇದೆ. ಈ ಚಿತ್ರ ಫೆಬ್ರವರಿ 7ಕ್ಕೆ ರಿಲೀಸ್ ಆಗ್ತಿದೆ.




Leave a Reply

Your email address will not be published. Required fields are marked *

error: Content is protected !!