ಕೋಲ್ಕತ್ತಾ: ಮತದಾನೋತ್ತರ ಸಮೀಕ್ಷೆಗಳು ಒಂದು ರೀತಿಯಲ್ಲಿ ಗಾಸಿಪ್ ಇದ್ದ ಹಾಗೆ ಅಂತಾ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಎಕ್ಸಿಟ್ ಪೋಲ್ ಬಗ್ಗೆ ಟ್ವೀಟ್ ಮಾಡಿರುವ ದೀದಿ, ಮೋದಿ ಹಾಗೂ ಶಾ ಮಾಡಿದ ಕುತಂತ್ರದ ರೀತಿಯಲ್ಲಿಯೇ ಸಮೀಕ್ಷೆಗಳು ಸಹ ಕುತಂತ್ರಗಳು ಮಾಡಿವೆ ಅಂತಾ ಗರಂ ಆಗಿ ಹೇಳಿದ್ದಾರೆ.
ನಾನು ಯಾವುದೇ ಚುನಾವಣೋತ್ತರ ಸಮೀಕ್ಷೆಗಳನ್ನ ನಂಬುವುದಿಲ್ಲ. ಒಂದು ವೇಳೆ ಅದು ನಮ್ಮ ಪರವಾಗಿ ಬಂದರೂ ಸಹ ನಾನು ನಂಬುವುದಿಲ್ಲ. ನಾವೆಲ್ಲ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ಮತದಾನ ಪ್ರಭುಗಳ ತೀರ್ಪನ್ನ ಒಟ್ಟಾಗಿ ಸ್ವೀಕರಿಸುತ್ತೇವೆ ಅಂತಾ ಹೇಳಿದ್ದಾರೆ.