ಮಾಲ್ಗುಡಿ ಡೇಸ್ ಟ್ರೇಲರ್ ಔಟ್

453

ನಟ ವಿಜಯರಾಘವೇಂದ್ರ ಅಭಿನಯದ ಬಹುನಿರೀಕ್ಷಿತ ಮಾಲ್ಗುಡಿ ಡೇಸ್ ಚಿತ್ರದ ಟ್ರೇಲರ್ ಔಟ್ ಆಗಿದೆ. ಸದಾ ಹೊಸತನಕ್ಕೆ, ವಿಭಿನ್ನ ಪಾತ್ರಗಳಿಗೆ ತಮ್ಮನ್ನ ತಾವು ತೆರೆದುಕೊಳ್ಳುವ ನಟರಲ್ಲಿ ವಿಜಯರಾಘವೇಂದ್ರ ಸಹ ಒಬ್ಬರು. ಅವರ ಪ್ರಯೋಗಶೀಲ ನಟನೆಗೆ ಈ ಚಿತ್ರ ಮತ್ತೆ ಸಾಕ್ಷಿಯಾಗಿದೆ.

ನಿರ್ದೇಶಕ ಕಿಶೋರ ಮೂಡಬಿದ್ರೆ ಅವರ ಪ್ರಥಮ ನಿರ್ದೇಶನದ ಮೂವಿಯಲ್ಲಿ ಚಿನ್ನಾರಿ ಮುತ್ತ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಯುವಕನ ಪಾತ್ರ, ಇನ್ನೊಂದು 60 ವರ್ಷ ದಾಟಿದ ವೃದ್ಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಾಕಷ್ಟು ನಿರೀಕ್ಷೆಗಳನ್ನ ಮೂಡಿಸಿದೆ.

ವಿಜಯಗೆ ನಟಿ ಗ್ರೀಷ್ಮಾ ಶ್ರೀಧರ ಜೊತೆಯಾಗಿದ್ದಾರೆ. ಚಿತ್ರದ ಬಗ್ಗೆ ಎಲ್ಲಡೆಯಿಂದ ಸಾಕಷ್ಟು ಮೆಚ್ಚುಗೆ ಮಾತುಗಳು ಕೇಳಿ ಬರ್ತಿವೆ. ಒಂದು ಟೈಂನಲ್ಲಿ ಮಾಸ್ ಸಿನ್ಮಾಗಳಲ್ಲಿ ಮಿಂಚಿದ ವಿಜಯರಾಘವೇಂದ್ರ ನಂತ್ರ ನಿಧಾನವಾಗಿ ಕ್ಲಾಸ್ ಸಿನಿಮಾಗಳತ್ತ ವಾಲಿದ್ರು. ಪುಟ್ಟರಾಜ ಗವಾಯಿಗಳ ಜೀವನಚರಿತ್ರೆಯ ಚಿತ್ರದಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡ್ರು. ಇದೀಗ ಮತ್ತೊಂದು ಪ್ರಯೋಗಕ್ಕೆ ಕೈ ಹಾಕಿದ್ದು ಸಕ್ಸಸ್ ಆಗುವ ಎಲ್ಲ ಲಕ್ಷಣಗಳಿವೆ. ಫೆಬ್ರವರಿ 7ಕ್ಕೆ ಸಿನಿಮಾ ಬಿಡುಗಡೆಯಾಗ್ತಿದೆ.




Leave a Reply

Your email address will not be published. Required fields are marked *

error: Content is protected !!