42ರ ಸಂಭ್ರಮದಲ್ಲಿ ವಿಜಯ ರಾಘವೇಂದ್ರ

258

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳಕ್ಕೆ ಬಾಲನಟನಾಗಿ ಎಂಟ್ರಿ ಕೊಟ್ಟು ರಾಷ್ಟ್ರ ಪ್ರಶಸ್ತಿ ಪಡೆದ ನಟ ವಿಜಯ ರಾಘವೇಂದ್ರ ಅವರಿಗೆ ಇಂದು 42ನೇ ಹುಟ್ಟು ಹಬ್ಬದ ಸಂಭ್ರಮ. ಚಿತ್ರರಂಗದ ದಿಗ್ಗಜರು ಸೇರಿದಂತೆ ಅವರ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

1993ರಲ್ಲಿ ಚಿನ್ನಾರಿ ಮುತ್ತ ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶ ಮಾಡಿದ್ರು. ಈ ಹೆಸರಿನಿಂದಲೇ ಇಂದಿಗೂ ಅವರನ್ನ ಕರೆಯುವುದು. ಮುಂದೆ 1995ರಲ್ಲಿ ಕೊಟ್ರೇಶಿ ಕನಸು ಚಿತ್ರದಲ್ಲಿ ನಟಿಸಿದ್ರು. ಅದರಲ್ಲಿನ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ್ರು.

ಮುಂದೆ 2002ರಲ್ಲಿ ನಿನಗಾಗಿ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರು. ಈ ಚಿತ್ರ ಸೂಪರ್ ಹಿಟ್ ಆಯ್ತು. ಇಲ್ಲಿಯವರೆಗೂ 49 ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಮಾಲ್ ಸ್ಕ್ರೀನ್ ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿಯೂ ಕಾಣಿಸಿಕೊಳ್ಳುತ್ತಿರುವ ನಟನಿಗೆ ಹುಟ್ಟು ಹಬ್ಬದ ಶುಭಾಶಯಗಳು.




Leave a Reply

Your email address will not be published. Required fields are marked *

error: Content is protected !!