ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ರಾಜ್ಯವೇ ಬೆಚ್ಚಿಬೀಳಿಸುವಂತೆ ಘಟನೆ ಕುಂದಾನಗರಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಚಿಕಿತ್ಸೆಗೆ ದಾಖಲಾಗಿದ್ದು ಮೂರು ಕಂದಮ್ಮಗಳು ನಿಗೂಢವಾಗಿ ಸಾವನ್ನಪ್ಪಿದ್ದು, ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಇದರಿಂದಾಗಿ ಜನರಲ್ಲಿ ಆತಂಕ ಮೂಡಿದಿದೆ.
ಒಂದು ವರ್ಷದ ಎರಡು ತಿಂಗಳ ಮಧು ಉಮೇಶ್ ಕುರಗುಂದಿ, ಒಂದೂವರೆ ವರ್ಷದ ಚೇತನಾ ಪೂಜಾರಿ ಹಾಗೂ 13 ತಿಂಗಳ ಪವಿತ್ರಾ ಹುಲಗುರ್ ಅನ್ನೋ ಮೂರು ಕಂದಮ್ಮಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಗೂಢವಾಗಿ ಮೃತಪಟ್ಟಿವೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಡಿಎಚ್ಓ ತಿಳಿಸಿದ್ದಾರೆ.