‘ಪೊರಕೆ’ ಬಿಟ್ಟು ಮರಳಿ ‘ಕೈ’ ಹಿಡಿದ ಶಾಸಕಿ

362

ನವದೆಹಲಿ: ಚಾದ್ನಿ ಚೌಕ್ ಕ್ಷೇತ್ರದ ಶಾಸಕಿ ಅಲ್ಕಾ ಲಾಂಬ ಆಪ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಲೋಕಸಭಾ ಚುನಾವಣೆ ಟೈಂನಿಂದಲೂ ಪಕ್ಷದೊಂದಿಗೆ ಮುನಿಸಿಕೊಂಡಿದ್ದ ಅಲ್ಕಾ, ಆಗಾಗ ರಾಜೀನಾಮೆ ನೀಡುವುದಾಗಿ ಹೇಳಿದ್ರು. ಅದು ಇಂದು ನಿಜವಾಗಿದೆ.

ಟ್ವೀಟರ್ ಮೂಲಕ ಆಪ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಆಪ್ ಗೆ ಗುಡ್ ಬಾಯ್ ಹೇಳುವ ಸಮಯ ಬಂದಿದೆ ಅಂತಾ ಹೇಳುವ ಮೂಲಕ, ಮರಳಿ ಕಾಂಗ್ರೆಸ್ ಗೆ ಹೊರಟಿದ್ದಾರೆ. 43 ವರ್ಷದ ಅಲ್ಕಾ 6 ವರ್ಷಗಳಿಂದ ಆಪ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ರು.

1994ರಿಂದ ಕಾಂಗ್ರೆಸ್ ನಲ್ಲಿ ರಾಜಕೀಯ ಜೀವನ ಶುರು ಮಾಡಿದ್ದ ಅಲ್ಕಾ ಲಂಬಾ, 2002ರಲ್ಲಿ ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿದ್ರು. 2003ರಲ್ಲಿ ಮೋತಿ ನಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮದನಲಾಲ ಖುರಾನ ಎದುರು ಪರಾಭವಗೊಂಡಿದ್ರು.

2014ರಲ್ಲಿ ಕಾಂಗ್ರೆಸ್ ತೊರೆದು ಆಪ್ ಜೊತೆ ಕೈಜೋಡಿಸಿದ್ದ ಲಂಬಾ, 2015ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಚಾದ್ನಿ ಚೌಕ್ ನಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಸುಮನಕುಮಾರ ಗುಪ್ತಾ ವಿರುದ್ಧ ಗೆಲುವು ದಾಖಲಿಸಿದ್ರು. ಇದೀಗ ಆಪ್ ಗೆ ಬಾಯ್ ಬಾಯ್ ಹೇಳಿ ಮರಳಿ ಕೈ ಹಿಡಿಯಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!