ಜಿಂಬಾಬ್ವೆ ನಡುಗಿಸಿದ್ದ ಮುಗಾಬೆ ನಿಧನ

367

ಅಂತಾರಾಷ್ಟ್ರೀಯ ಸುದ್ದಿ, ಡೆಸ್ಕ್

ಹರಾರೆ: ಜಿಂಬಾಬ್ವೆ ಮಾಜಿ ರಾಷ್ಟ್ರಾಧ್ಯಕ್ಷ 95 ವರ್ಷದ ರಾಬರ್ಟ್ ಮುಗಾಬೆ ನಿಧನರಾಗಿದ್ದಾರೆ. ಕೆಲದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಮುಗಾಬೆ ನಿಧನವನ್ನ, ಅಧ್ಯಕ್ಷ ಎಮರ್ಸನ್ ಮನನ್ ಗಾಗ್ರಾ ಟ್ವೀಟರ್ ಮೂಲಕ ಖಚಿತಪಡಿಸಿದ್ದಾರೆ.

ಮುಗಾಬೆ ಸ್ವತಂತ್ರ ಹೋರಾಟದ ಅಗ್ರಗಣ್ಯ ನಾಯಕರಾಗಿದ್ರು ಎಂದು ಹೇಳಿದ್ದಾರೆ. 1980ರಲ್ಲಿ ನಡೆದ ಕ್ಷೀಪ್ರಕ್ರಾಂತಿಯಿಂದಾಗಿ ಅಲ್ಪಸಂಖ್ಯಾತ ಶ್ವೇತವರ್ಣಿಯರ ಆಡಳಿತವನ್ನ ಕೆಳಗಿಳಿಸಿ ಅಧ್ಯಕ್ಷರಾದವರು. ಆರಂಭದ ದಿನಗಳಲ್ಲಿ ಉತ್ತಮ ಆಡಳಿತ ನೀಡಿದ್ರು. ಆದ್ರೆ, ಮುಂದಿನ ದಿನಗಳಲ್ಲಿ ದುರಾಡಳಿತ, ಮಾನವ ಹಕ್ಕುಗಳ ಉಲ್ಲಂಘನೆ, ಸರ್ವಾಧಿಕಾರಿ ಧೋರಣೆಯ ಆರೋಪ ಕೇಳಿ ಬಂದ್ವು.

ಮಗಾಬೆ ಅವರನ್ನ ಅಧಿಕಾರದಿಂದ ಕೆಳಗಿಳಿಸಲು ವಿರೋಧ ಪಕ್ಷ ಹಾಗೂ ಸೇನೆ ಸತತ ಪ್ರಯತ್ನ ನಡೆಸುತ್ತಲೇ ಇತ್ತು. 37 ವರ್ಷಗಳ ಕಾಲ ಆಡಳಿತ ನಡೆಸಿದ್ದ ಮುಬಾಗೆಯನ್ನ ಕೆಳಗಿಳಿಸಿದ್ದು 2017ರಲ್ಲಿ. ಜಿಂಬಾಬ್ವೆ ರಾಜಕೀಯ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ರಾಷ್ಟ್ರಾಧ್ಯಕ್ಷರಾಗಿದ್ದವರು ಅನ್ನೋ ಹೆಗ್ಗಳಿಕೆ ಮುಗಾಬೆಗಿದೆ.




Leave a Reply

Your email address will not be published. Required fields are marked *

error: Content is protected !!