ಇಸ್ರೋ ಜನಕನಿಗೆ ಗೂಗಲ್ ಡೂಡಲ್ ಗೌರವ

486

ಇಂದು ಭಾರತ ಬಾಹ್ಯಾಕಾಶ ಸ್ಥಾಪಕ ವಿಕ್ರಮ ಸಾರಾಭಾಯ್ ಅವರು ಜನ್ಮಶತಮಾನೋತ್ಸವ. ಹೀಗಾಗಿ ಗೂಗಲ್ ಸಂಸ್ಥೆ ತನ್ನ ಡೂಡಲ್ ನಲ್ಲಿ ಅವರ ಫೋಟೋ ಹಾಕುವ ಮೂಲಕ ಗೌರವ ಸಲ್ಲಿಸಿದೆ.

ಮುಂಬೈ ಮೂಲದ ಗೆಸ್ಟ್ ಆರ್ಟಿಸ್ಟ್ ಪವನ್ ರಾಜುರ್ಕರ್ ಈ ಚಿತ್ರ ರಚಿಸಿದ್ದಾರೆ. ಇದನ್ನ ಗೂಗಲ್ ಸಂಸ್ಥೆ ಡೂಡಲ್ ನಲ್ಲಿ ಹಾಕುವ ಮೂಲಕ ಡಾ.ವಿಕ್ರಮ ಸಾರಾಭಾಯ್ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ. ಈ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನದ ಚಾಲಕ ಶಕ್ತಿ ಎಂದು ಅವರನ್ನ ಬಣ್ಣಿಸಲಾಗಿದೆ.

1919ರಲ್ಲಿ ಗುಜರಾತಿನ ಅಹ್ಮದಾಬಾದಿನಲ್ಲಿ ವಿಕ್ರಮ ಅವರು ಜನಿಸಿದ್ರು. ಇಂಗ್ಲೆಂಡ್ ನ ಕ್ರೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಸಾರಾಭಾಯ್ ಅವರು ಮರಳಿ ಭಾರತಕ್ಕೆ ಬಂದ್ಮೇಲೆ ಕುಟುಂಬ ಮತ್ತು ಸ್ನೇಹಿತರ ಜೊತೆಗೂಡಿ ಭಾರತೀಯ ಬಾಹ್ಯಾಕಾಶ ಸ್ಥಾಪನೆ ಮಾಡುವಲ್ಲಿ ಯಶಸ್ವಿಯಾದ್ರು. ಭಾರತದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನ 1966ರಲ್ಲಿ ಇವರಿಗೆ ನೀಡಿ ಗೌರವಿಸಲಾಗಿದೆ.

ಇಸ್ರೋ ಇಂದು ಜಗತ್ತಿನ ತುಂಬಾ ತನ್ನ ಶಕ್ತಿ ಏನು ಅನ್ನೋದು ತೋರಿಸಿದೆ. ಚಂದ್ರನ ಮೇಲೆ ನೌಕೆ ಇಳಿಸಿದ ನಾಲ್ಕನೇ ರಾಷ್ಟ್ರವಾಗಿದೆ. ಇದೆಲ್ಲ ಸಾಧ್ಯವಾಗಿದ್ದು ಡಾ.ವಿಕ್ರಮ ಸಾರಾಭಾಯ್ ಅವರು ಹಾಕಿಕೊಟ್ಟ ಮಾರ್ಗದರ್ಶನದಿಂದ ಅನ್ನೋದು ನೂರಕ್ಕೆ ನೂರರಷ್ಟು ಸತ್ಯ.




Leave a Reply

Your email address will not be published. Required fields are marked *

error: Content is protected !!