ನಿರಾಶ್ರಿತರತ್ತ ಅಗತ್ಯ ವಸ್ತುಗಳನ್ನ ಹೊತ್ತು ಸಾಗಿದ ಪ್ರಜಾಸ್ತ್ರ ವಾಹನ

642

ಸಿಂದಗಿ: ಪ್ರವಾಹದಿಂದ ತಮ್ಮ ಇಡೀ ಬದುಕನ್ನ ಕಳೆದಕೊಂಡ ಉತ್ತರ ಕರ್ನಾಟಕದ ಕಣ್ಣೀರ ಕಥೆ ಮುಂದುವರೆದಿದೆ. ಹೀಗಾಗಿ ಉತ್ತರದೊಂದಿಗೆ ಕರುನಾಡಿನ ಅನೇಕ ಜಿಲ್ಲೆಗಳು ಹೆಗಲು ಕೊಟ್ಟಿವೆ. ನಿರಾಶ್ರಿತರಾಗಿರುವ ಜನರಿಗೆ ಅಗತ್ಯ ವಸ್ತುಗಳನ್ನ ತಲುಪಿಸುವ ಕೆಲಸ ನಿರಂತರವಾಗಿ ನಡೆದಿದೆ. ಅದೇ ನಿಮ್ಮ ಪ್ರಜಾಸ್ತ್ರ ವೆಬ್ ಪೋರ್ಟಲ್ ಮತ್ತು ನಿಮಗಾಗಿ ಟಕ್ನಾಲಜಿ, ಸಾಫ್ಟ್ ಸೊಲಿನ್ ಸಂಸ್ಥೆ ಸಹಭಾಗಿತ್ವದಲ್ಲಿ, ನಿರಾಶ್ರಿತರಿಗಾಗಿ ಅಗತ್ಯ ವಸ್ತುಗಳ ಸಂಗ್ರಹ ನಡೆಸಿತು.

ಸಿಂದಗಿ ಪಟ್ಟಣದ ಜನತೆ ನಮ್ಮದೊಂದು ಮನವಿಗೆ ಉತ್ತಮ ರೀತಿಯಲ್ಲಿ ಸ್ಪಿಂದಿಸಿದ್ರು. ತಮ್ಮ ಕೈಲಾದ ಸಹಾಯ ಮಾಡುವ ಮೂಲಕ, ನಿರಾಶ್ರಿತರೊಂದಿಗೆ ನಾವು ಇದ್ದೇವೆ ಅಂತಾ ಗಟ್ಟಿಯಾಗಿ ಹೇಳಿದ್ರು. ಪಟ್ಟಣದ ಹಳೆ ಬಜಾರ್ ನಲ್ಲಿರುವ ಕಿರಾಣಿ ವರ್ತಕರು, ಬಂಗಾರದ ಅಂಗಡಿಯವರು, ಬಟ್ಟೆ ವ್ಯಾಪಾರಿಗಳು, ಮೆಡಿಕಲ್ ಶಾಪ್ ಗಳು, ಆಸ್ಪತ್ರೆಗಳು, ಬಸವೇಶ್ವರ ಸರ್ಕಲ್ ನ ಆಟೋ ಚಾಲಕರ ಸಂಘ, ಪಟ್ಟಣದ ಗೆಳೆಯರ ಬಳಗ ಹೀಗೆ, ನೂರಾರು ಜನ ಅಗತ್ಯ ವಸ್ತುಗಳನ್ನ ನೀಡಿದ್ರು.

ಅಕ್ಕಿ, ಗೋಧಿ ಹಿಟ್ಟು, ರಾಗಿ ಹಿಟ್ಟು, ಅಡುಗೆ ಎಣ್ಣೆ, ಸಕ್ಕರಿ, ಬೆಲ್ಲ, ಬಿಸ್ಕಿತ್ ಬಾಕ್ಸ್ ಗಳು, ಬೇಸಿಕ್ ಮೆಡಿಸಿನ್ಸ್, ನೀರಿನ ಬಾಟಲ್ ಗಳು, ಹೊದಿಕೆ, ಬಟ್ಟೆಗಳು, ಸೋಪ್, ಟೂತ್ ಪೇಸ್ಟ್, ಕೊಬ್ಬರಿ ಎಣ್ಣೆ ಸೇರಿದಂತೆ ಸಾಕಷ್ಟು ಅಗತ್ಯ ವಸ್ತುಗಳನ್ನ ನೀಡುವ ಮುಖೇನ, ನಮ್ಮ ಮನವಿಗೆ ಹೃದಯಪೂರ್ವಕವಾಗಿ ಸ್ಪಂದಿಸಿದ್ದಾರೆ.

ಇನ್ನು ಮನೆಗೆ ಎರಡು ‘ರೊಟ್ಟಿ ಅಭಿಯಾನ’ ನಡೆಸಿದ ಕಾರ್ಯಕ್ಕೂ ಉತ್ತಮ ಬೆಂಬಲ ಸಿಕ್ಕಿತು. ಕನಕದಾಸ ಸರ್ಕಲ್ ನಿಂದ ಶುರುವಾದ ಅಭಿಯಾನ ಪೂಜಾರಿಗಳ ಓಣಿ, ಗೌಡರ ಓಣಿ, ಲಿಂಗಾಯತರ ಓಣಿ, ರೋಡಗರ ಓಣಿ, ಅಂಬಿಗರ ಚೌಡಯ್ಯನ ಗಲ್ಲಿಯ ಭೂತಿನವರ ಓಣಿ ಜನತೆ ರೊಟ್ಟಿಯನ್ನ ನೀಡುವ ಮೂಲಕ ಅಭಿಯಾನ ಯಶಸ್ವಿಯಾಗುವಲ್ಲಿ ಸಹಕರಿಸಿದ್ರು. ಇದ್ರಿಂದಾಗಿ 1,500ಕ್ಕೂ ಹೆಚ್ಚು ರೊಟ್ಟಿಗಳು ಸಂಗ್ರಹವಾದ್ವು. ಹೀಗೆ ಸಂಗ್ರಹವಾದ ಅಗತ್ಯ ವಸ್ತುಗಳನ್ನ ಹೊತ್ತ ವಾಹನ ಬಾಗಲಕೋಟೆ ಹಾಗೂ ಬೆಳಗಾವಿ ಭಾಗದ ನಿರಾಶ್ರಿತ ಕೇಂದ್ರಗಳತ್ತ ಸೋಮವಾರ ರಾತ್ರಿ ಸಾಗಿತು.

ನಮ್ಮದೊಂದು ಮನವಿಗೆ ಬೆಂಬಲ ನೀಡಿ ಕೈಲಾದ ಸಹಾಯ ಮಾಡಿದ ಸಿಂದಗಿ ಪಟ್ಟಣದ ಸಮಸ್ತ ಜನತೆಗೆ ನಮ್ಮದೊಂದು ಸಲಾಂ.




Leave a Reply

Your email address will not be published. Required fields are marked *

error: Content is protected !!