100 ಕ್ರೋರ್ ಚಿತ್ರದ ಟ್ರೇಲರ್ ಲಾಂಚ್ ಮಾಡಲಿರುವ ರಮ್ಯಾ

237

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ನಟನೆಯ 100 ಕ್ರೋರ್ ಚಿತ್ರದ ಟ್ರೇಲರ್ ನಾಳೆ ರಿಲೀಸ್ ಆಗುತ್ತಿದೆ. ಅದನ್ನು ಸ್ಯಾಂಡಲ್ ವುಡ್ ಕ್ವೀನ್ ಎಂದು ಇಂದಿಗೂ ಕರೆಸಿಕೊಳ್ಳುತ್ತಿರುವ ನಟಿ ರಮ್ಯಾ ರಿಲೀಸ್ ಮಾಡುತ್ತಿದ್ದಾರೆ.

ಚಿತ್ರರಂಗದಿಂದ ರಮ್ಯಾ ದೂರುವಾಗಿ ಬಹಳ ಕಾಲವಾಗಿದೆ. ಆದರೆ, ಅವರ ಕ್ರೇಜ್ ಕಡಿಮೆಯಾಗಿಲ್ಲ. ರಾಜಕೀಯದಲ್ಲೂ ಸಕ್ರಿಯವಾಗಿ ಕಾಣಿಸಿಕೊಳ್ಳದ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಸಿನಿಮಾಗಳ ಬಗ್ಗೆ ಹೆಚ್ಚು ಮಾತನಾಡುತ್ತಿದ್ದು, ಮತ್ತೆ ತೆರೆಯ ಮೇಲೆ ಬರುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ.

ಈ ಬಗ್ಗೆ ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದು ನಟ ಚೇತನ್ ನಿಮಗಾಗಿ ನಾನು ಏನುಬೇಕಾದರೂ ಮಾಡುತ್ತೇನೆ ಎಂದಿದ್ದಾರೆ. ಇನ್ನು ನಾಳೆ ರಿಲೀಸ್ ಆಗುತ್ತಿರುವ ಡಾಲಿ ಧನಂಜಯ್ ನಟನೆಯ ಬಡವ ರಾಸ್ಕಲ್ ಚಿತ್ರಕ್ಕೂ ಶುಭ ಕೋರಿದ್ದಾರೆ.




Leave a Reply

Your email address will not be published. Required fields are marked *

error: Content is protected !!