ಉತ್ತರ ಕರ್ನಾಟಕದ ‘ಉತ್ತರಕಾಂಡ’ ಟೀಸರ್ ಗಿಚ್ ಐತಿ

220

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ನಟ ರಾಕ್ಷಸ ಡಾಲಿ ಧನಂಜಯ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಉತ್ತರಕಾಂಡ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ. ಪಕ್ಕಾ ಜವಾರಿ ಉತ್ತರ ಕರ್ನಾಟಕ ಭಾಷೆಯಲ್ಲಿರುವ ಟೀಸರ್ ನೋಡಿದವರು ಗಿಚ್ ಐತಿ ಅಂತಿದ್ದಾರೆ.

ಗಬ್ರು ಸತ್ಯನಾಗಿ ಡಾಲಿ ಕಾಣಿಸಿಕೊಂಡಿದ್ದು, ಟೀಸರ್ ಆರಂಭದಿಂದಲೇ ಉತ್ತರ ಕರ್ನಾಟ ಭಾಷೆಯ ಸೊಗಡು ತುಂಬಿಕೊಂಡಿದೆ. ರತ್ನನ್ ಪ್ರಪಂಚ ಬಳಿಕ ರೋಹಿತ್ ಪದಕಿ ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಉತ್ತರಕಾಂಡ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಸಾಮಾನ್ಯವಾಗಿ ಬೈಯುವ ಬೈಗುಳ ಕೇಳಿದ ಹುಡುಗರು ಅವ್ನೌನ್ ಏನ್ ಐತಲೇ ಟೀಸರ್. ಬಿಜಿಎಂ ಜಬರ್ದಸ್ತ್. ಮತ್ತೊಂದು ಬ್ಲಾಕ್ ಬ್ಲಸ್ಟರ್ ಮೂವಿ ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಇಲ್ಲಿ ಡಾಲಿಗೆ ಜೋಡಿಯಾಗಿದ್ದು, ಇವರಿಬ್ಬರ ಪೇರ್ ನೋಡಲು ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ಡಾಲಿ ಹುಟ್ಟು ಹಬ್ಬಕ್ಕೆ ಹೀರೋ ಪರಿಚಯದ ಟೀಸರ್ ಎಲ್ಲರಿಗೂ ಕಿಕ್ ಕೊಡ್ತಿದೆ.




Leave a Reply

Your email address will not be published. Required fields are marked *

error: Content is protected !!