ಉತ್ತರ ಪ್ರದೇಶ: ವಸತಿ ನಿಲಯದಿಂದ 89 ವಿದ್ಯಾರ್ಥಿನಿಯರು ನಾಪತ್ತೆ!

314

ಪ್ರಜಾಸ್ತ್ರ ಸುದ್ದಿ

ಗೊಂಡಾ: ಉತ್ತರ ಪ್ರದೇಶದ ಪರಸ್ಪುರದ ಕಸ್ತೂರಿಬಾ ಗಾಂಧಿ ವಸತಿ ನಿಲಯದಿಂದ 89 ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸೋಮವಾರ ತಡರಾತ್ರಿ ಅಧಿಕಾರಿಯೊಬ್ಬರು ಹಠಾತ್ ತಪಾಸಣೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ.

ವಸತಿ ನಿಲಯದಲ್ಲಿ 100 ವಿದ್ಯಾರ್ಥಿನಿಯರು ನೋಂದಾಯಿಸಿಕೊಂಡಿದ್ದಾರೆ. ಆದರೆ, ಅಲ್ಲಿ ಕಂಡು ಬಂದಿದ್ದ 11 ವಿದ್ಯಾರ್ಥಿನಿಯರು ಮಾತ್ರ. ವಾರ್ಡನ್ ಸರಿತಾ ಸಿಂಗ್ ಅವರನ್ನು ಕೇಳಿದರೆ ಸರಿಯಾದ ಉತ್ತರ ನೀಡಿಲ್ಲವೆಂದು ತಿಳಿದು ಬಂದಿದೆ. ಹೀಗಾಗಿ ವಾರ್ಡನ್ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಈ ಘಟನೆಯಿಂದ ಎಲ್ಲೆಡೆ ಆತಂಕ ಮೂಡಿದೆ. ವಸತಿ ನಿಲಯದಲ್ಲಿ ಬರೋಬ್ಬರಿ 89 ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದು ಹೇಗೆ? ಇಷ್ಟೊಂದು ಪ್ರಮಾಣದ ವಿದ್ಯಾರ್ಥಿನಿಯರು ಹೋಗಿದ್ದು ಎಲ್ಲಿಗೆ? ಏನಿದರ ರಹಸ್ಯ ಅನ್ನೋದು ಸೇರಿ ಅನೇಕ ಪ್ರಶ್ನೆಗಳು ಮೂಡಿದ್ದು, ತನಿಖೆ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!