ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಡಾಲಿ ಧನಂಜಯ್, ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ಉತ್ತರ ಕರ್ನಾಟಕ ಸೊಗಡು ಇರುವ ಉತ್ತರಕಾಂಡ ಚಿತ್ರದ ಅಪ್ ಡೇಟ್ ಹೊರ ಬಿದ್ದಿದೆ. ಚಿತ್ರದ ನಿರ್ಮಾಪಕ ಯೋಗಿ ಜಿ ರಾಜ್ ಅವರು ಪೋಸ್ಟರ್ ವೊಂದನ್ನು ಬಿಟ್ಟಿದ್ದು, ನಟ ಧನಂಜಯ್ ಗಬ್ರು ಸತ್ಯ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ನಿರ್ದೇಶಕ ರೋಹಿತ್ ಪದಕಿ ಮಾಸ್ ಸಿನಿಮಾವೊಂದು ಹೇಳಲು ರೆಡಿಯಾಗಿದ್ದಾರೆ. ಬ್ಯಾಕ್ ಪೋಸ್ಟರ್ ನಲ್ಲಿ ಗಬ್ರು ಸತ್ಯ ಎಂದು ಬರೆದಿದ್ದು, ಆಗಸ್ಟ್ 22ರ ಸಂಜೆ 5.55ಕ್ಕೆ ಟೀಸರ್ ಬಿಡಲು ಸಿದ್ಧವಾಗಿದೆ. ಈ ಮೂಲಕ ಡಾಲಿ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಗಬ್ರು ಸತ್ಯನ ಪಾತ್ರ ಹೇಗಿರುತ್ತೆ ಎಂದು ಅಭಿಮಾನಿಗಳು ಎದುರು ನೋಡುವಂತಾಗಿದೆ.