ಸಿಮ್ ವಿತರಕರಿಗೆ ಪೊಲೀಸ್ ಅನುಮತಿ ಕಡ್ಡಾಯ

261

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಮೊಬೈಲ್ ಸಿಮ್ ಕಾರ್ಡ್ ಅಂಗಡಿಯಲ್ಲಿ ಮಾತ್ರವಲ್ಲಿ ಎಲ್ಲೆಂದರಲ್ಲಿ ಮಾರಾಟ ಮಾಡಲಾಗುತ್ತಿದೆ. ಕಳೆದ 8-10 ವರ್ಷಗಳ ಹಿಂದೆ ಗಲ್ಲಿ ಗಲ್ಲಿಯಲ್ಲಿ ಸಿಮ್ ಮಾರಾಟ ನಡೆಯುತ್ತಿತ್ತು. ಒಬ್ಬರಿಗೆ ನಾಲ್ಕೈದು ಸಿಮ್ ಕೊಡುತ್ತಿದ್ದರು. ಈಗ ಅದು ತಕ್ಕಮಟ್ಟಿಗೆ ನಿಂತಿದೆ.

ಇಂದಿಗೂ ಸಹ ರಸ್ತೆ ಪಕ್ಕದಲ್ಲಿ ಸಿಮ್ ಮಾರಾಟ ಮಾಡುವುದನ್ನು ನೋಡುತ್ತೇವೆ. ಆದರೆ, ಇನ್ನು ಮುಂದೆ ಸಿಮ್ ವಿತರಕರು ಕಡ್ಡಾಯವಾಗಿ ಪೊಲೀಸ್ ಅನುಮತಿ ಪಡೆಯಬೇಕು. ನಿಯಮ ಉಲ್ಲಂಘಿಸಿದರೆ 10 ಲಕ್ಷ ರೂಪಾಯಿ ದಂಡವೆಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಮೋಸದ ಚಟುವಟಿಕೆಗಳನ್ನು ಮಟ್ಟ ಹಾಕಲು ಪರಿಶೀಲನೆ ಕಡ್ಡಾಯ ಮಾಡಲಾಗಿದೆ. 10 ಲಕ್ಷ ಸಿಮ್ ವಿತರಕರು ಇದ್ದಾರೆ. ಇದುವರೆಗೂ 52 ಲಕ್ಷ ಮೊಬೈಲ್ ಸಂಪರ್ಕ ಕಡಿತಗೊಳಿಸಲಾಗಿದೆ. 67 ಸಾವಿರ ವಿತರಕರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು, 300 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಅನ್ನೋ ಮಾಹಿತಿಯನ್ನು ನೀಡಿದ್ದಾರೆ.

ಅನೇಕ ಅಪರಾಧಿ ಕೃತ್ಯಗಳಲ್ಲಿ ಯಾರದೋ ದಾಖಲೆ ನೀಡಿ ಖರೀದಿಸಿ ಮೊಬೈಲ್ ನಂಬರ್ ಗಳು ಪತ್ತೆಯಾಗಿವೆ. ಅಪರಾಧಿ ಚಟುವಟಿಕೆಗಳಲ್ಲಿ ಭಾಗಿಯಾದವರು ನಕಲಿ ದಾಖಲೆ ಸೃಷ್ಟಿಸಿ ಸಿಮ್ ಖರೀದಿಸಿ ಅಥವ ಮೊಬೈಲ್ ಕಳ್ಳತನ ಮಾಡಿ ದೇಶವಿರೋಧ ಕೃತ್ಯಗಳನ್ನು ನಡೆಸಿರುವುದು ಕಂಡು ಬಂದಿದೆ. ಹೀಗಾಗಿ ಸಿಮ್ ವಿತರಣೆ ಸಂದರ್ಭದಲ್ಲಿ ದಾಖಲೆಗಳ ಪರಿಶೀಲನೆ ಕಟ್ಟುನಿಟ್ಟಿನದ್ದಾಗಿರಬೇಕಾಗಿದೆ.




Leave a Reply

Your email address will not be published. Required fields are marked *

error: Content is protected !!