ಪ್ರೇಕ್ಷಕರಿಲ್ಲದೆ ಆಟವಾಡಿ.. ಷರತ್ತುಗಳು ಅನ್ವಯ

362

ಬೆಂಗಳೂರು: ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಕ್ರೀಡಾ ಚಟುವಟಿಕೆಗಳಿಗೂ ಷರತ್ತು ಬದ್ಧ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರೀಡೆಗಳಿಗೆ ಅವಕಾಶ ನೀಡಲಾಗಿದೆ ಎಂದು ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.

ಕಬಡ್ಡಿ, ಕುಸ್ತಿಗೆ ಅವಕಾಶವಿಲ್ಲ. ಈಜುಕೋಳು, ಜಿಮ್ ಓಪನ್ ಮಾಡುವಂತಿಲ್ಲ. ಇವುಗಳನ್ನ ಹೊರತು ಪಡಿಸಿ ಉಳಿದ ಆಟಗಳನ್ನ ಆಡಬಹುದು. ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್, ಸ್ಯಾನಟೈಸರ್ ಕಡ್ಡಾಯ. ಇದರ ಜೊತೆಗೆ ಪ್ರೇಕ್ಷಕರಿಲ್ಲದೆ ಆಟವನ್ನ ಆಡಬೇಕು. ಈ ಎಲ್ಲ ಷರತ್ತುಗಳೊಂದಿಗೆ ಕೆಲವೊಂದು ಕ್ರೀಡೆಗಳಿಗೆ ಅನುಮತಿ ನೀಡಲಾಗಿದೆ.

ಬಾಸ್ಕೆಟ್ ಬಾಲ್, ಹಾಕಿಯಲ್ಲಿ ಸಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವೇ ಅನ್ನೋ ಪ್ರಶ್ನೆ ಮೂಡಿದೆ. ಎಲ್ಲ ಆಟಗಾರರು ದೂರ ಇರಲು ಸಾಧ್ಯವಿಲ್ಲ. ಬಾಲ್ ಕಸಿದುಕೊಳ್ಳುವ ಸಲುವಾಗಿಯಾದ್ರೂ ಇಬ್ಬರು, ಮೂರು ಜನ ಅಟ್ಯಾಕ್ ಮಾಡಬೇಕಾಗುತ್ತೆ. ಇಲ್ಲಿ ಹೇಗೆ ಸಾಮಾಜಿಕ ಅಂತರ ಅನ್ನೋ ಪ್ರಶ್ನೆ ಮೂಡಿದೆ




Leave a Reply

Your email address will not be published. Required fields are marked *

error: Content is protected !!