‘ಉ.ಕ’ದಲ್ಲಿ 1 ಲಕ್ಷ ಕೋಟಿ ಹೂಡಿಕೆಗೆ ಒಪ್ಪಂದ

352

ಹುಬ್ಬಳ್ಳಿ: ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುವಲ್ಲಿ ಕರ್ನಾಟಕದ ಪಾತ್ರ ಬಹುದೊಡ್ಡದಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಇದೆ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಆಯೋಜಿಸಿರುವ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ 2020ರ ಕಾರ್ಯಕ್ರಮ ಉದ್ಘಾಟಿಸಿ ಮಾತ್ನಾಡಿದ್ರು.

ಉತ್ತರ ಕರ್ನಾಟಕ ಭಾಗದಲ್ಲಿ ಆಯೋಜಿಸಿದ್ದ ಸಮಾವೇಶ ಯಶಸ್ವಿಯಾಗಿದೆ. ಈ ಭಾಗದ ವಿವಿಧ ಕಡೆ 1 ಲಕ್ಷ ಕೋಟಿ ಹೂಡಿಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಅಂತಾ ಸಿಎಂ ಹೇಳಿದ್ದಾರೆ. ರಾಜ್ಯದಲ್ಲಿ ಸುಗಮ ಬ್ಯುಸಿನೆಸ್ ನಡೆಸಲು ನಾವು ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆ. ಉದ್ಯಮ ಪ್ರಾರಂಭಕ್ಕೆ ತೊಂದರೆಯಾಗದಂತೆ ಆದಷ್ಟು ಬೇಗ ಅನುಮೋದನೆ ಸಿಗುವಂತೆ ವ್ಯವಸ್ಥೆ ರೂಪಿಸಲಾಗುವುದು ಅಂತಾ ಹೇಳಿದ್ರು.

ಜಾಹೀರಾತು

ರಾಜ್ಯದ 9 ಕ್ಲಸ್ಟರ್ ಗಳಲ್ಲಿ 5 ಉತ್ತರ ಕರ್ನಾಟಕದಲ್ಲಿ, ಬೆಳಗಾವಿಯಲ್ಲಿ 300 ಎಕರೆ ಪ್ರದೇಶದಲ್ಲಿ ಮೊದಲ ಖಾಸಗಿ ಏರೋ ಸ್ಪೇಸ್ ಎಸ್ಇ ಜೆಡ್ ಅನ್ನು ಏಕುಸ್ ಕಂಪನೆ ರೆಡಿ ಮಾಡಿದ್ದು, ಇದು ಪ್ರಸ್ತುತ ಕಾರ್ಯನಿರ್ವಹಿಸಲಿದೆ ಅಂತಾ ತಿಳಿಸಿದ್ರು. ಬಳ್ಳಾರಿಯಲ್ಲಿ ಟೆಕ್ಸ್ಟೈಲ್ ಕ್ಲಸ್ಟರ್ ತೆರೆಯಲಾಗುವುದು. ಹುಬ್ಬಳ್ಳಿ-ಧಾರವಾಡದಲ್ಲಿ ಆಟೋ ಕಾಂಪೋನೆಂಟ್ಸ್ ಉತ್ಪಾದನಗಳ ಘಟಕಗಳ ಕ್ಲಸ್ಟರ್ ನಿರ್ಮಿಸಲಾಗುವುದು. ಹೀಗೆ ಹಲವು ಉದ್ಯಮಶೀಲ ಕಾರ್ಯಗಳನ್ನ ಉತ್ತರ ಕರ್ನಾಟಕ ಭಾಗದಲ್ಲಿ ಮಾಡಲಾಗುವುದು ಅಂತಾ ಹೇಳಿದ್ರು.

ಈ ವೇಳೆ ಕೇಂದ್ರ ಸಚಿವರಾದ ಡಿ.ವಿ ಸದಾನಂದಗೌಡ, ಪ್ರಲ್ಹಾದ ಜೋಶಿ, ರಾಜ್ಯ ಸಚಿವರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಅನೇಕ ಮುಖಂಡರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!