ಏಕ್ ಲವ್ ಯಾ ಟೀಸರ್: ಡಿಂಪಲ್ ಕ್ವೀನ್ ಲಿಪ್ ಲಾಕ್ ಸೀನ್…

412

ನಿರ್ದೇಶಕ ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳ್ತಿರುವ ಏಕ್ ಲವ್ ಯಾ ಸಿನ್ಮಾದ ಟೀಸರ್, ಪ್ರೇಮಿಗಳ ದಿನವಾದ ಇಂದು ರಿಲೀಸ್ ಆಗಿದೆ. ನಟ ರಾಣಾಗೆ ಜೋಡಿಯಾಗಿ ನಟಿ ರಚಿತಾ ರಾಮ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಜೊತೆ ಇನ್ನೊಂದು ಜೋಡಿಯ ಕಾಣಿಸಿಕೊಂಡಿದೆ.

ಟೀಸರ್ ಶುರುವಿನಲ್ಲಿಯೇ ಹೀರೋ ಜೊತೆ ಸಿಗರೇಟ್ ಹಚ್ಚುವ ಸೀನ್ ನಲ್ಲಿ ನಟಿ ರಚಿತಾ ರಾಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇದಕ್ಕೂ ಮೊದ್ಲು ಏಕ್ ಲವ್ ಯಾ ಚಿತ್ರ ತಂಡ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಅವರನ್ನ ನೆನಪು ಮಾಡಿಕೊಂಡಿದೆ.

ಪ್ರೀತಿ, ಕಾಮ, ಮೋಸದ ವಿಚಾರಗಳನ್ನ ಹೇಳುವ ಟೀಸರ್ ನಲ್ಲಿ ಒಂದಿಷ್ಟು ಭಾವನಾತ್ಮಕ ಅಂಶಗಳು ಗೋಚರಿಸುತ್ತವೆ. ಜೋಗಿ ಪ್ರೇಮ್ ನ ಪ್ರತಿಯೊಂದು ಸಿನ್ಮಾದಲ್ಲಿ ಪ್ರೀತಿ ಜೊತೆಗೆ ತಾಯಿ ಸೆಂಟಿಮೆಂಟ್ ಇರುತ್ತೆ. ಆದ್ರೆ, ಏಕ್ ಲವ್ ಯಾ ಸ್ವಲ್ಪ ವಿಭಿನ್ನ ಅನಿಸ್ತಿದೆ. ಆದ್ರೆ, ಮೂವಿ ನೋಡುವ ತನಕ ಹೀಗೆ ಅಂತಾ ಹೇಳುವುದು ಕಷ್ಟ. ಒಟ್ಟಿನಲ್ಲಿ ಏಕ್ ಲವ್ ಯಾ ಚಿತ್ರ ಕುತೂಹಲ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!