ಹಾಸ್ಟೆಲ್ ವಿದ್ಯಾರ್ಥಿನಿಯರ ವಿಡಿಯೋ ಲೀಕ್: ಬೃಹತ್ ಪ್ರತಿಭಟನೆ

257

ಪ್ರಜಾಸ್ತ್ರ ಸುದ್ದಿ

ಮೊಹಾಲಿ: ಹಾಸ್ಟೆಲ್ ವಿದ್ಯಾರ್ಥನಿಯರ ವಿಡಿಯೋಗಳನ್ನು ಲೀಕ್ ಮಾಡಿದ ಪ್ರಕರಣ ಸಂಬಂಧ ಪಂಜಾಬಿನ ಮೊಹಾಲಿಯಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಖಾಸಗಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಹಾಸ್ಟೇಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಮಾಡಿದ ಸಹ ವಿದ್ಯಾರ್ಥಿನಿಯೊಬ್ಬಳು ಶಿಮ್ಲಾದಲ್ಲಿನ ಯುವಕನಿಗೆ ಕಳುಹಿಸಿದ್ದಳು. ಆತ ಅವುಗಳನ್ನು ಪೋರ್ನ್ ವೆಬ್ ಸೈಟ್ ಗಳಲ್ಲಿ ಅಪ್ ಲೋಡ್ ಮಾಡಿದ್ದ. ಇದರಿಂದ ಓರ್ವ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ನಡೆದಿದೆ.

ಇದೀಗ ವಿಡಿಯೋ ಮಾಡಿ ಹಂಚಿದ ವಿದ್ಯಾರ್ಥಿನಿಯನ್ನು ಬಂಧಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತೆ. ವಿದ್ಯಾರ್ಥಿಗಳು ಶಾಂತಿಯಿಂದ ನಡೆದುಕೊಳ್ಳಬೇಕು. ಇದು ಸೂಕ್ಷ್ಮ ವಿಚಾರವಾಗಿದೆ ಎಂದು ಪಂಜಾಬ್ ಶಿಕ್ಷಣ ಸಚಿವ ಹರ್ ಜೋತ್ ಸಿಂಗ್ ಬಯಾನ್ಸ್ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!