ತಾಯಿ ತ್ಯಾಗ ಸ್ಮರಿಸಿದ ಹುಡ್ಗನ ಮಾತು ವೈರಲ್

530

ಕೇರಳ: ತಾಯಿಯ ಎರಡನೇ ಮದುವೆ ಬಗ್ಗೆ ಖುಷಿಯಿಂದ ತನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ 23 ವರ್ಷದ ಹುಡ್ಗ, ಅದರ ಹಿಂದಿನ ನೋವಿನ ಕಥೆಯನ್ನ ಹೇಳಿದ್ದಾನೆ. ಇದು ಇದೀಗ ಸಾಕಷ್ಟು ಸುದ್ದಿಯಾಗಿದೆ.

ಕೇರಳದ ಕೊಲ್ಲಂ ಜಿಲ್ಲೆಯ ಗೋಕುಲ್ ಶ್ರೀಧರ್ ಅನ್ನೋ 23 ವರ್ಷದ ಹುಡ್ಗ, ತನ್ನ ತಾಯಿಯ ಎರಡನೇ ಮದುವೆಗೆ ಶುಭ ಕೋರಿದ್ದಾನೆ. ಇದರ ಜೊತೆಗೆ ತನ್ನ ತಾಯಿ ಮೊದಲ ಗಂಡನಿಂದ ಎಷ್ಟೊಂದು ಹಿಂಸೆಯನ್ನ ಅನುಭವಿಸಿದ್ದಾಳೆ ಅನ್ನೋದನ್ನ ಸಹ ಹೇಳಿದ್ದಾನೆ.

ಮೊದಲ ತಂದೆ ತಾಯಿಗೆ ರಕ್ತ ಬರುವ ರೀತಿ ಹೊಡೆಯುತ್ತಿದ್ದ. ಸದಾ ಹಿಂಸೆ ನೀಡ್ತಿದ್ದ. ಆದ್ರೂ ತಾಯಿ ಅದನ್ನ ಸಹಿಸಿಕೊಂಡಿದ್ದಳು. ಇದೆಲ್ಲ ಯಾಕೆ ಅಮ್ಮ ಅಂತಾ ಕೇಳಿದ್ದಕ್ಕೆ ನನಗಾಗಿ ಅಂತಾ ಹೇಳಿದ್ದಳು. ನನ್ನ ಸಲುವಾಗಿ ಅವಳು ಸಾಕಷ್ಟು ತ್ಯಾಗ ಮಾಡಿದ್ದಾಳೆ. ಅಮ್ಮ ನಾನು ಮನೆ ಬಿಟ್ಟು ಬರುವಾಗ ನನಗೆ 16 ವರ್ಷ. ಆಗ್ಲೇ ಅವಳಿಗೆ ಎರಡನೇ ಮದುವೆ ವಿಷ್ಯ ಹೇಳಿದ್ದೆ. ಆದ್ರೆ, ಅವಳು ಕೇಳಿರ್ಲಿಲ್ಲ.

ಅಮ್ಮ ಹೋಗ್ತಿದ್ದ ಸ್ಕೂಲ್ ಕಡೆಯಿಂದಲೂ ಆಫರ್ ಬಂದಾಗ ಬೇಡವೆಂದಿದ್ಳು. ಆದ್ರೆ, ಅಂದು ನಾನು ಆಡಿದ ಮಾತು ಇದೀಗ ನಿಜವಾಗಿದೆ. ನನ್ಗೆ ತುಂಬಾ ಖುಷಿಯಾಗಿದೆ ಅಂತಾ ಗೋಕುಲ್ ಹೇಳಿದ್ದಾನೆ. ಈ ಮೂಲಕ ತನ್ನ ತಾಯಿ ತನಗಾಗಿ ಏನೆಲ್ಲ ನೋವು, ಕಷ್ಟ ಅನುಭವಿಸಿದ್ದಾಳೆ ಅನ್ನೋದನ್ನ ಕಣ್ಣಾರೆ ಕಂಡ ಮಗನ ಈ ಸಂದೇಶ ಯಾರಿಗಾದ್ರೂ ಕಣ್ಣೀರು ಬರುವಂತೆ ಮಾಡುತ್ತೆ.


TAG


Leave a Reply

Your email address will not be published. Required fields are marked *

error: Content is protected !!