SBI ಗ್ರಾಹಕರಿಗೆ ಖುಷಿ ಸುದ್ದಿ

421

ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಇಲ್ಲೊಂದು ಖುಷಿಯ ಸುದ್ದಿ ಹೊರ ಬಿದ್ದಿದೆ. ಎಸ್ ಬಿಐ ಸಾಲ ದರವನ್ನ ಕಡಿಮೆ ಮಾಡಿ ಸಾಲಗಳನ್ನ ಅಗ್ಗಗೊಳಿಸಿದೆ. ಈ ಮೂಲಕ ಎಸ್ ಬಿಐ ತನ್ನ ಎಂಸಿಎಲ್ಆರ್ ಅನ್ನು ಬಾಡಿಗೆದಾರರಲ್ಲಿ 5 ಬೇಸಿಸ್ ಪಾಂಯಿಂಟ್ ಕಡಿತಗೊಳಿಸಿದೆ.

ದರ ಕಡಿತದ ನಂತರ ಎಸ್ ಬಿಐನ ಒಂದು ವರ್ಷದ ಎಂಸಿಎಲ್ಆರ್ ವಾರ್ಷಿಕ ಶೇಕಡ 8.0 ಆಗಿದೆ. ಇದು ನವೆಂಬರ್ 10ರಿಂದ ಜಾರಿಗೆ ಬರಲಿದೆ. ಎಫ್ ಡಿ ದರಗಳನ್ನ ಠೇವಣಿಗಳಿಗಾಗಿ 15 ಬೇಸಿಸ್ ಪಾಯಿಂಟ್ ಗಳಿಂದ ಒಂದು ವರ್ಷದವರೆಗೆ 2 ವರ್ಷಕ್ಕಿಂತ ಕಡಿಮೆ ಅವಧಿಗೆ ಕಡಿತಗೊಳಿಸ್ತಿದೆ. ಪ್ರಸ್ತುತವಿರುವ ಗೃಹಸಾಲ ಎಂಸಿಎಲ್ಆರ್ ಪಾಯಿಂಟ್ ತಗ್ಗಿಸಲಾಗಿದೆ.

2019-20ನೇ ಹಣಕಾಸು ವರ್ಷದಲ್ಲಿ ಸಾಲ ದರದಲ್ಲಿ ಸತತ 7ನೇ ಬಾರಿ ಕಡಿತ ಮಾಡಲಾಗಿದೆ. ಈ ಮೂಲಕ ಎಸ್ ಬಿಐಯಿಂದ ಗ್ರಾಹಕರಿಗೆ ಮೇಲಿಂದ ಮೇಲೆ ಒಂದಿಷ್ಟು ಖುಷಿಯ ನಿರ್ಧಾರವನ್ನ ತೆಗೆದುಕೊಳ್ಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!