2ನೇ ಹಂತದ ಮತದಾನ: ವಿಜಯಪುರದ 4 ತಾಲೂಕು, 88 ಗ್ರಾ.ಪಂ ಕಂಪ್ಲೀಟ್ ಮಾಹಿತಿ

359

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಡಿಸೆಂಬರ್ 27ರಂದು ರಾಜ್ಯದಲ್ಲಿ 2ನೇ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುತ್ತಿದೆ. ಅದರಂತೆ ಗುಮ್ಮಟನಗರಿಯ ನಾಲ್ಕು ತಾಲೂಕಿನ 88 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯುತ್ತಿದೆ. ಸಿಂದಗಿ, ದೇವರಹಿಪ್ಪರಗಿ, ಇಂಡಿ ಹಾಗೂ ಚಡಚಣ ತಾಲೂಕಿನ ಗ್ರಾಮ ಪಂಚಾಯ್ತಿಗಳಿಗೆ ಮತದಾನವಾಗ್ತಿದೆ.

ಈ ನಾಲ್ಕು ತಾಲೂಕುಗಳ ಗ್ರಾಮ ಪಂಚಾಯ್ತಿಗಳ ಒಟ್ಟು 1,628 ಸ್ಥಾನಗಳಿಗೆ ವೋಟಿಂಗ್ ಆಗ್ತಿದೆ. ಅಂತಿಮವಾಗಿ ಅಖಾಡದಲ್ಲಿ 4,250 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನು 119 ಜನರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಕೆಲ ಕಾರಣಗಳಿಂದಾಗಿ 6 ಗ್ರಾಮ ಪಂಚಾಯ್ತಿಗಳಿಗೆ ಎಲೆಕ್ಷನ್ ನಡೆಯುತ್ತಿಲ್ಲ. 4 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ.

ಸಿಂದಗಿ ತಾಲೂಕಿನಲ್ಲಿ 191 ಮತಗಟ್ಟೆಗಳನ್ನ ತೆರೆಯಲಾಗಿದೆ. 1 ಮತಗಟ್ಟೆಗೆ ನಾಲ್ಕು( 1 ಪಿಆರ್ ಓ, 1 ಎಪಿಆರ್ ಓ, 2 ಪೊಲೀಸ್) ಜನ ಸಿಬ್ಬಂದಿ ನೇಮಿಸಲಾಗಿದೆ. 28 ಬಸ್, ಮಿನಿ ಬಸ್, ಕ್ರಸರ್ ಜೀಪ್ ಸೇರಿ 13 ಸೇರಿದಂತೆ 42 ಸಾರಿಗೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಪೊಲೀಸ್ ಬಂದೋಬಸ್ತಿ ನೀಡಲಾಗಿದೆ.

ನಾಲ್ಕು ತಿಂಗಳು ಸೇರಿದಂತೆ ಸೂಕ್ಷ್ಮ, ಅತಿ ಸೂಕ್ಷ್ಮ, ಸಾಧಾರಣ ಒಳಗೊಂಡಂತೆ ಒಟ್ಟು 784 ಮತಗಟ್ಟೆಗಳನ್ನ ಓಪನ್ ಮಾಡಲಾಗಿದೆ. ಇದಕ್ಕೆ 99 ಚುನಾವಣಾ ಅಧಿಕಾರಿಗಳು, 108 ಸಹಾಯಕ ಚುನಾವಣಾಧಿಕಾರಿಗಳು, 4 ಎಂಸಿಸಿ ತಂಡ, 43 ಸೆಕ್ಟರ್ ಅಧಿಕಾರಿಗಳು, 1,118 ಪೊಲೀಸ್ ಹಾಗೂ ಗೃಹ ರಕ್ಷಕ ಸಿಬ್ಬಂದಿ ನೇಮಕ ಮಾಡಲಾಗಿದೆ. ಪುರುಷರು, ಮಹಿಳೆ, ಇತರರು ಸೇರಿದಂತೆ ಒಟ್ಟು 5,45,655 ಜನರು ವೋಟರ್ ಲಿಸ್ಟ್ ನಲ್ಲಿದ್ದಾರೆ. ಡಿಸೆಂಬರ್ 30ಕ್ಕೆ ಎಲ್ಲ ಗ್ರಾಮ ಪಂಚಾಯ್ತಿಗಳ ಫಲಿತಾಂಶ ಹೊರ ಬೀಳಲಿದೆ.




Leave a Reply

Your email address will not be published. Required fields are marked *

error: Content is protected !!