ಡಬಲ್ ಸಂಚುರಿಯತ್ತ ಮೆಣಸಿನಕಾಯಿ

205

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯಾದ್ಯಂತ ಹಸಿ ಮೆಣಸಿನಕಾಯಿ ಬೆಲೆ ಮತ್ತೆ ಏರಿಕೆಯಾಗಿದೆ. ಕಳೆದೊಂದು ತಿಂಗಳಿನಿಂದ ಮೆಣಸಿನಕಾಯಿ ಬೆಲೆ ಕೆಜಿಗೆ 200 ರೂಪಾಯಿಗೆ ಬಂದು ಹೋಗುತ್ತಿದೆ. ಈ ಹಿಂದೆ 200 ರೂಪಾಯಿಗೆ ಒಂದು ಕೆಜಿ ಮಾರಾಟವಾಗಿದ್ದು, ನಂತರ ಕಡಿಮೆಯಾಗಿ 70 ರೂಪಾಯಿ ತನಕ ಬಂದಿತ್ತು.

ಇದೀಗ ಮತ್ತೆ ಬೆಲೆ ಏರಿಕೆ ಕಂಡ ಮೆಣಸಿನಕಾಯಿ ಒಂದು ಕೆಜಿಗೆ 170-180 ರೂಪಾಯಿಗೆ ಮಾರಾಟವಾಗುತ್ತಿದೆ. ರಫ್ತಿನ ಪ್ರಮಾಣದಲ್ಲಿ ಏಳಿಕೆಯಾಗಿರುವುದರಿಂದ ಇಷ್ಟೊಂದು ದುಬಾರಿಯಾಗಲು ಕಾರಣ ಎಂದು ವ್ಯಾಪಾರಸ್ಥರು ಹೇಳುತ್ತಾರೆ. ನೂರಾರು ರೂಪಾಯಿಗೆ ಬರುತ್ತಿದ್ದ ತರಕಾರಿ ಇದೀಗ ಸಾವಿರಾರು ರೂಪಾಯಿ ತನಕ ಬಂದಿದೆ ಎಂದು ಗ್ರಾಹಕರು ಕಣ್ಣೀರು ಹಾಕುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!