ಗೃಹಲಕ್ಷ್ಮಿ ಯೋಜನೆ: 3 ದಿನದಲ್ಲಿ ಎಷ್ಟಾಯ್ತು ನೋಂದಣಿ?

213

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ ಕಳೆದ ಮೂರು ದಿನಗಳ ಹಿಂದೆ ಚಾಲನೆ ಸಿಕ್ಕಿದೆ. ಹೀಗಾಗಿ ಮನೆ ಯಜಮಾನಿಯರು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.

ಕಳೆದ ಮೂರು ದಿನಗಳಲ್ಲಿ 22 ಲಕ್ಷದ 90 ಸಾವಿರದ 782 ಜನರ ಅರ್ಜಿ ಸಲ್ಲಿಕೆಯಾಗಿವೆ. ಶನಿವಾರ ಒಂದೇ ದಿನದಲ್ಲಿ 14 ಲಕ್ಷದ 16 ಸಾವಿರದ 462 ಅರ್ಜಿಗಳು ನೋಂದಾಣಿಯಾಗಿವೆ. ಇನ್ನು ರಾಜ್ಯದ ಹಲವು ಭಾಗಗಳಲ್ಲಿ ನೋಂದಣಿ ಪ್ರಕ್ರಿಯರಿಗೆ ಸಾರ್ವಜನಿಕರಿಂದ ಹಣ ಪಡೆಯುತ್ತಿರುವುದು ತಿಳಿದು ಬಂದಿದ್ದು, ಅಂತಹ ಕೇಂದ್ರಗಳ ಲಾಗಿನ್ ಐಡಿ ಬಂದ್ ಮಾಡಲಾಗಿದೆ.

ಬಾಗಲಕೋಟೆಯ ಶೂರ್ಪಾಲಿ ಗ್ರಾಮ ಒನ್ ಕೇಂದ್ರದ ಲಾಗಿನ್ ಐಡಿ ಬಂದ್ ಮಾಡಲಾಗಿದೆ. ನಂದಗಾಂವ ಗ್ರಾಮದ ಗ್ರಮ ಒನ್ ಕೇಂದ್ರದ ಲಾಗಿನ್ ಐಡಿಯೂ ಸಹ ಬಂದ್ ಮಾಡಲಾಗಿದೆ. ಹೀಗೆ ಹಲವು ಕಡೆ ಹಣ ಪಡೆಯುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಅವರಿಗೆ ನೀಡಿರುವ ಪರವಾನಿಗೆ ತಡೆ ಹಿಡಿಯಲಾಗಿದೆ.




Leave a Reply

Your email address will not be published. Required fields are marked *

error: Content is protected !!