ಡೆಂಗ್ಯೂ ಸೋಂಕಿಗೆ ಗುಜರಾತ್ ಶಾಸಕಿ ಬಲಿ

459

ಪ್ರಜಾಸ್ತ್ರ ಸುದ್ದಿ

ಗಾಂಧಿನಗರ: ಡೆಂಗ್ಯೂ ಸೋಂಕಿನಿಂದ ಬಳಲುತ್ತಿದ್ದ ಗುಜರಾತ್ ಬಿಜೆಪಿ ಶಾಸಕಿ ಆಶಾ ಪಟೇಲ್(44) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅಹಮದಾಬಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೆಂಟಿಲೇಟರ್ ಸಹಾಯದ ಮೂಲಕವಿದ್ದ ಅವರು, ಇಂದು ಕೊನೆಯುಸಿರೆಳೆದಿದ್ದಾರೆ.

ಶಾಸಕಿ ಆಶಾ ಪಟೇಲ್ ನಿಧನಕ್ಕೆ ಸಿಎಂ ಭೂಪೇಂದ್ರ ಪಟೇಲ್, ರಾಜ್ಯಪಾಲ ಆಚಾರ್ಯ ದೇವವ್ರತ ಸೇರಿದಂತೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ನಾಳೆ ಅಂತಿಮ ಸಂಸ್ಕಾರ ನಡೆಯಲಿದೆಯಂತೆ.

ಆಶಾ ಪಟೇಲ್ ಮೆಹನ್ಸಾ ಜಿಲ್ಲೆಯ ಊಂಜಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ. 2017ರಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದರು. ನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ವಿಜಯ ಸಾಧಿಸಿದ್ದರು.




Leave a Reply

Your email address will not be published. Required fields are marked *

error: Content is protected !!