ಗುಟ್ಕಾ, ಪಾನ್ ತಿನ್ನುವವರೆ ಇನ್ಮುಂದೆ ಹುಷಾರ್

531

ನವದೆಹಲಿ: ಎಲ್ಲೆಂದರಲ್ಲಿ ಉಗುಳುವುದ್ರಿಂದ ಡೆಡ್ಲಿ ಕರೋನಾ ಹರಡುತ್ತೆ ಅನ್ನೋದು ಹಲವು ದಿನಗಳಿಂದ ಹೇಳಲಾಗ್ತಿದೆ. ಹೀಗಾಗಿ ತಂಬಾಕು ಉತ್ಪನ್ನಗಳನ್ನ ಸಾರ್ವಜನಿಕವಾಗಿ ಸೇವನೆ ಮಾಡುವಂತಿಲ್ಲವೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಜರ್ದಾ, ಪಾನ್ ಮಸಾಲಾ, ಗುಟ್ಕಾ, ಸುಪಾರಿ, ಎಲೆ ಅಡಿಕೆ ಸೇರಿದಂತೆ ತಂಬಾಕು ಉತ್ಪನ್ನಗಳ ಸೇವನೆಗೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಹೀಗಾಗಿ ರಾಜ್ಯ ಸರ್ಕಾರಗಳು ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶಿಸಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ತಜ್ಷರಿಂದ ಸಲಹೆ ಪಡೆದ ಮೇಲೆ ತಂಬಾಕು ಪದಾರ್ಥಗಳನ್ನ ತಿಂದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದಕ್ಕೆ ನಿಷೇಧ ಹೇರಲಾಗಿದೆ. ಹೀಗಾಗಿ ಇನ್ಮುಂದೆ ಪಬ್ಲಿಕ್ ನಲ್ಲಿ ಸ್ಟೈಲ್ ಆಗಿ ತಿನ್ನುವುದು, ಉಗುಳುವುದು ಬಂದ್ ಆಗಲಿದೆ.

ಸಾಂದರ್ಭಿಕ ಚಿತ್ರ




Leave a Reply

Your email address will not be published. Required fields are marked *

error: Content is protected !!