ಮೇ 3ರ ತನಕ ಭಾರತ ಲಾಕ್ ಡೌನ್…

422

ನವದೆಹಲಿ: ಮಾರ್ಚ್ 24ರಂದು ರಾತ್ರಿ 8ಗಂಟೆ ಮಾತ್ನಾಡಿದ ಮೋದಿ, 21 ದಿನಗಳ ದೇಶವನ್ನ ಲಾಕ್ ಡೌನ್ ಮಾಡಲಾಗುವುದು ಎಂದು ಘೋಷಿಸಿದ್ರು. ಹೀಗಾಗಿ ಇಂದು ಮತ್ತೊಮ್ಮೆ ದೇಶದ ಜನರ ಮುಂದೆ ಬಂದು ಮಾತ್ನಾಡಿದ ಅವರು, ಕರೋನಾ ವಿರುದ್ಧದ ಹೋರಾಟದ ಕುರಿತು ಹತ್ತು ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯ ಶುಭಾಶಯಗಳನ್ನ ತಿಳಿಸಿದ್ರು.

ಇಡೀ ದೇಶದ ಜನತೆ ಕಷ್ಟಗಳನ್ನ ಅನುಭವಿಸಿ, ದೇಶವನ್ನ ಕಷ್ಟದಿಂದ ಪಾರು ಮಾಡಿದ್ದೀರಿ. ನನ್ಗೆ ಗೊತ್ತಿದೆ. ನೀವು ಎಷ್ಟೊಂದು ಕಷ್ಟದಲ್ಲಿದ್ದೀರಿ ಎಂದು. ಊಟ, ನೀರು ಇಲ್ಲ. ನಿಮ್ಮ ಕುಟುಂಬಸ್ಥರಿಂದ ದೂರ ಉಳಿದಿದ್ದೀರಿ. ಕರ್ತವ್ಯವನ್ನ ಮಾಡ್ತಿದ್ದೀರಿ. ನಿಮ್ಗೆಲ್ಲರಿಗೂ ಧನ್ಯವಾದಗಳು.

ನಾವು ಸಾಮೂಹಿಕವಾಗಿ ಕರೋನಾ ವಿರುದ್ಧ ಹೋರಾಡುವುದು, ಸಂಕಲ್ಪ ಮಾಡುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನಿಜವಾಗಿ ಗೌರವ ಸಲ್ಲಿಸುವುದಾಗಿದೆ. ದೇಶದ ಜನತೆಯಿಂದ ಮೊದಲ ಹಂತದ ಕರೋನಾ ಲಾಕ್ ಡೌನ್ ಸಕ್ಸಸ್ ಆಗಿದೆ. ಹಲವು ರಾಜ್ಯಗಳಲ್ಲಿ ಹೊಸ ವರ್ಷದ ಹಬ್ಬಗಳಿವೆ. ಅವುಗಳನ್ನ ಆಚರಣೆ ಮಾಡಲು ಆಗ್ತಿಲ್ಲ. ಹೀಗಾಗಿ ನೀವು ಎಷ್ಟೊಂದು ತಾಳ್ಮೆಯಿಂದ ಮನೆಯಲ್ಲಿರುತ್ತೀರಿ ಅನ್ನೋದು ಮುಖ್ಯವಾಗಿದೆ. ನಿಮ್ಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗ್ಲಿ ಎಂದು ಕೇಳಿಕೊಳ್ಳುತ್ತೇನೆ.

ಇಡೀ ವಿಶ್ವ ಕರೋನಾದಿಂದ ಎಷ್ಟೊಂದು ಪರದಾಡ್ತಿದೆ ಅನ್ನೋದಕ್ಕೆ ಸಾಕ್ಷಿಯಿದೆ. ಭಾರತಕ್ಕೆ ಕರೋನಾ ಬರ್ತಿದೆ ಎಂದಾಕ್ಷಣ ಏರ್ ಪೋರ್ಟ್ ನಲ್ಲಿ ತಪಾಸಣೆ ನಡೆಯಿತು. ವಿದೇಶದಿಂದ ಬಂದವರನ್ನ 14 ದಿನ ಗೃಹ ಬಂಧನ ಮಾಡಲಾಯ್ತು. ಮಾಲ್ ಸೇರಿದಂತೆ ಎಲ್ಲವನ್ನ ಬಂದ್ ಮಾಡಲಾಯ್ತು. ವಿಶ್ವದ ದೊಡ್ಡ ದೊಡ್ಡ ದೇಶಗಳ ಪರಿಸ್ಥಿತಿ ನೋಡಿ. ಇದರಲ್ಲಿ ಭಾರತ ಹೇಗಿದೆ ನೋಡಿ. ಕಳೆದ ಒಂದೂವರೆ ತಿಂಗಳಿಂದ ಭಾರತ ಸರಿಯಾದ ದಾರಿಯಲ್ಲಿದೆ. ಬೇರೆ ದೇಶಗಳಲ್ಲಿ ಶೇಕಡ 25 ರಿಂದ 30ರಷ್ಟು ಹೆಚ್ಚಾಗಿದೆ. ಒಂದು ವೇಳೆ ಲಾಕ್ ಡೌನ್ ಆಗದೇ ಹೋಗಿದ್ರೆ ಭಾರತದಲ್ಲಿನ ಸ್ಥಿತಿ ಬಗ್ಗೆ ಕಲ್ಪನೆ ಮಾಡಿಕೊಳ್ಳಲು ಆಗ್ತಿರ್ಲಿಲ್ಲ. ಲಾಕ್ ಡೌನ್, ಸಾಮಾಜಿಕ ಅಂತರ ಸಾಕಷ್ಟು ಸಾಧಿಸಿದೆ.

ಆರ್ಥಿಕವಾಗಿ ಕಷ್ಟವಾಗ್ತಿದೆ. ಆದ್ರೆ, ಭಾರತದ ಜನತೆಯ ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ. ರಾಜ್ಯ ಸರ್ಕಾರಗಳು ಸಹ ದಿನದ 24 ಗಂಟೆ ಕೆಲಸ ಮಾಡ್ತಿವೆ. ಸಾಕಷ್ಟು ಕಷ್ಟ ಪಡ್ತಿವೆ. ಭಾರತದಲ್ಲಿ ಕರೋನಾ ವಿರುದ್ಧ ಮುಂದೆ ಹೇಗೆ ಹೋರಾಡಬೇಕು. ಇದರಲ್ಲಿ ಸಕ್ಸಸ್ ಆಗೋದು ಹೇಗೆ? ನಷ್ಟ ಕಡಿಮೆಯಾಗೋದು ಹೇಗೆ ಅನ್ನೋದು ಮುಖ್ಯವಾಗಿದೆ. ಈಗಾಗ್ಲೇ ಹಲವು ರಾಜ್ಯಗಳು ಲಾಕ್ ಡೌನ್ ಮುಂದುವರೆಸಿವೆ. ಮೇ 3ರ ತನಕ ಲಾಕ್ ಡೌನ್ ಮುಂದುವರೆಯಲಿದೆ. ಇದರಲ್ಲಿ ನಾವು ಯಶಸ್ವಿಯಾಗದೆ ಹೋದ್ರೆ ಸಾಕಷ್ಟು ಕಷ್ಟವಿದೆ.

ಹಾಟ್ ಸ್ಪಾಟ್ ಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗ್ತಿದೆ. ಪ್ರತಿಯೊಂದು ರಾಜ್ಯದ ಜಿಲ್ಲೆ, ತಾಲೂಕು, ಪಟ್ಟಣ, ಗ್ರಾಮ ಸೇರಿದಂತೆ ಎಲ್ಲೆಡೆ ಸಾಕಷ್ಟು ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲಾಗುವುದು. ಈ ಅಗ್ನಿ ಪರೀಕ್ಷೆಗಳಲ್ಲಿ ಸಫಲರಾಗಬೇಕಿದೆ. ಏಪ್ರಿಲ್ 20ರ ತನಕ ಕರೋನಾ ಸಂಪೂರ್ಣ ಅವಲೋಕನ ಮಾಡಲಾಗುವುದು. ಏಪ್ರಿಲ್ 20ರಷ್ಟರಲ್ಲಿ ಕರೋನಾ ಕಂಟ್ರೋಲ್ ಗೆ ಬಂದ್ರೆ ಲಾಕ್ ಡೌನ್ ಸಡಲಿಕೆ. ಪ್ರಧಾನ ಮಂತ್ರಿ ಗರಿಬಿ ಯೋಜನೆ ಮೂಲಕ ಬಡವರಿಗೆ ಎಲ್ಲ ಸವಲತ್ತುಗಳು ಸಿಗಲಿವೆ. ರೈತರಿಗೆ ಎಲ್ಲ ರೀತಿಯ ಸೌವಲತ್ತು ಸಿಗಲಿವೆ.

ಭಾರತದಲ್ಲಿ ವೈದ್ಯಕೀಯ ಸಂಬಂಧಿಸಿದ ಎಲ್ಲ ಔಷಧಿಗಳು ಇವೆ. ಯಾರೂ ಹೆದರಬೇಕಾಗಿಲ್ಲ. ಈಗಾಗ್ಲೇ ಭಾರತದಲ್ಲಿ 1 ಲಕ್ಷ ಬೆಡ್ ಗಳನ್ನ ರೆಡಿ ಮಾಡಲಾಗಿದೆ. ದೇಶದಲ್ಲಿರುವ ಯುವ ವಿಜ್ಞಾನಿಗಳು, ವೈದ್ಯರು ಕರೋನಾ ವಿರುದ್ಧದ ಹೋರಾಟಕ್ಕೆ ಮುಂದೆ ಬರಬೇಕಿದೆ ಎಂದು ಕೇಳಿಕೊಳ್ಳುತ್ತೇನೆ ಎಂದ ಅವರು, ಅಲ್ದೇ ಸಪ್ತ ಸಲಹೆಗಳನ್ನ ನೀಡಿದ್ದಾರೆ.

ಮನೆಯಲ್ಲಿ ಅನಾರೋಗ್ಯದಿಂದಿರುವ ಹಿರಿಯರ ಬಗ್ಗೆ ಗಮನ ಹರಿಸಿ

ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸಾಧ್ಯವಾದ್ರೆ ಮನೆಯಲ್ಲಿ ಮಾಸ್ಕ್ ರೆಡಿ ಮಾಡಿ

ಬಿಸಿ ನೀರು ಸೇವನೆ ಸೇರಿದಂತೆ ಆರೋಗ್ಯದತ್ತ ಗಮನ ಹರಿಸಿ

ಆರೋಗ್ಯ ಸೇತು ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. ಇತರರಿಗೂ ಹೇಳಿ

ಎಷ್ಟು ಸಾಧ್ಯವೋ ಅಷ್ಟು ಬಡವರಿಗೆ ಸಹಾಯ ಮಾಡಿ

ಕರೋನಾ ಯುದ್ಧದಲ್ಲಿ ಹೋರಾಡ್ತಿರುವ ವೈದ್ಯರು, ನರ್ಸ್, ಪೊಲೀಸ್ರು, ಪೌರ ಕಾರ್ಮಿಕರಿಗೆ ಗೌರವ ಕೊಡಿ

ಮೇ 3ರ ತನಕ ಲಾಕ್ ಡೌನ್ ಕಾಪಾಡಿ. ಎಲ್ಲಿ ಇದ್ದೀರೋ ಅಲ್ಲೆ ಇರಿ. ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗ್ಲಿ ಎಂದು ಹೇಳುವ ಮೂಲಕ ಮತ್ತೆ 19 ದಿನಗಳ ಕಾಲ್ ಡೌನ್ ಮುಂದುವರೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!