ಹೋಟೆಲ್ ನಲ್ಲಿ ಅಕ್ರಮ ಮದ್ಯ ಮಾರಾಟ: ಓರ್ವ ಬಂಧನ

401

ಪ್ರಜಾಸ್ತ್ರ ಸುದ್ದಿ

ದೇವರಹಿಪ್ಪರಗಿ: ಹೋಟೆಲ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಿರುವ ಘಟನೆ ತಾಲೂಕಿನ ಜಾಲವಾದ ರಸ್ತೆಯ ಬಳಿ ಪತ್ತೆಯಾಗಿದೆ. ಜಾಲವಾದ ಗ್ರಾಮದ ನಿವಾಸಿ ಮಲ್ಲಪ್ಪ‌ ಶಂಕ್ರಪ್ಪ ಬೂದಿಹಾಳ ಬಂಧಿತ ಆರೋಪಿಯಾಗಿದ್ದಾನೆ.

ಹೋಟೆಲ್ ಮೇಲೆ ದಾಳಿ ಮಾಡಿದ ಅಬಕಾರಿ ಇಲಾಖೆ ಅಧಿಕಾರಿಗಳು 62 ಸಾವಿರ ಮೌಲ್ಯದ ಮದ್ಯವನ್ನ ಜಪ್ತಿ ಮಾಡಲಾಗಿದೆ. ಇದರ ಜೊತೆಗೆ 3,200 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!