ಸ್ಪೀನ್ ಮಾಂತ್ರಿಕನ ಚಿತ್ರದಿಂದ ಹೊರ ನಡೆದ ಸ್ಟಾರ್ ನಟ

272

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ವಿಶ್ವ ಪ್ರಸಿದ್ಧ ಸ್ಪೀನ್ ಬೌಲರ್, ಶ್ರೀಲಂಕಾ ಮಾಜಿ ಆಟಗಾರ ಮುತ್ತಯ್ಯ ಮುರುಳೀಧರನ್ ಅವರ ಜೀವನ ಚರಿತ್ರೆ ಸಿನಿಮಾವಾಗ್ತಿದೆ. ಚಿತ್ರಕ್ಕೆ ಅವರ 800 ವಿಕೆಟ್ ಗಳ ಮೈಲುಗಲ್ಲನ್ನೇ ಇಡಲಾಗಿದೆ. ಇದರ ತಮಿಳು ಭಾಷೆಯ ಚಿತ್ರದಲ್ಲಿ ನಟ ವಿಜಯ ಸೇತುಪತಿ ನಟಿಸಲು ಒಪ್ಪಿಕೊಂಡು ಟ್ವೀಟ್ ಸಹ ಮಾಡಿ, ಒಂದಿಷ್ಟು ಫೋಟೋ ಬಿಟ್ಟಿದ್ರು.

ಮುರುಳೀಧರನ್ ಬಯೋಪಿಕ್ ನಲ್ಲಿ ಸೇತುಪತಿ ನಟಿಸುವುದಕ್ಕೆ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇದ್ರಿಂದಾಗಿ ಮುರುಳೀಧರನ್ ಸೇತುಪತಿ ಬಳಿ ಮನವಿ ಮಾಡಿಕೊಂಡು ಚಿತ್ರದಿಂದ ಹೊರಗುಳಿಯಲು ಹೇಳಿದ್ದಾರೆ. ನನ್ನಿಂದ ಅವರ ಸಿನಿಮಾ ಕರಿಯರ್ ಹಾಳಾಗುವುದು ಬೇಡ. ಹೀಗಾಗಿ 800 ಚಿತ್ರದಿಂದ ಹೊರಗುಳಿಯುವಂತೆ ಕೇಳಿಕೊಂಡಿದ್ದೇನೆ ಎಂದಿದ್ದಾರೆ.

ನಟಿ ವಿಜಯ ಸೇತುಪತಿ ಸಹ ಟ್ವೀಟ್ ಮೂಲಕ ಅವರ ಬರಹವನ್ನ ಹಂಚಿಕೊಂಡಿದ್ದಾರೆ. ತಮಿಳಿಗರ ವಿರೋಧ ವ್ಯಕ್ತಪಡಿಸಿದ್ರಿಂದ ನಟ ಸೇತುಪತಿ ಇದೀಗ 800 ಚಿತ್ರವನ್ನ ಕೈ ಬಿಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!