ಬ್ರೇಕಿಂಗ್ ನ್ಯೂಸ್
Search

‘ಸಾವಿನ ವ್ಯಾಪಾರಿ’ಯಾದ ವಿಜಯ್

220

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಟಾರ್ ನಿರ್ದೇಶಕ ಅಟ್ಲಿ ಆಕ್ಷನ್ ಕಟ್ ಹೇಳುತ್ತಿರುವ ಜವಾನ್ ಚಿತ್ರ ಈಗಾಗ್ಲೇ ಸಾಕಷ್ಟು ಹವಾ ಕ್ರಿಯೇಟ್ ಮಾಡಿದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್, ಲೇಡಿ ಸೂಪರ್ ಸ್ಟಾರ್ ನಯನತಾರಾ, ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ನಟಿ ಪ್ರಿಯಾಮಣಿ, ತಳಪತಿ ವಿಜಯ್ ಸ್ಪೆಷಲ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಂದು ವಿಲನ್ ಆಗಿ ಕಾಣಿಸಿಕೊಂಡಿರುವ ನಟ ವಿಜಯ್ ಸೇತುಪತಿ ಗೆಟಪ್ ರಿಲೀಸ್ ಮಾಡಲಾಗಿದೆ. ಸೌಥ್ ಸಿನಿ ದುನಿಯಾದಲ್ಲಿ ನಾಯಕ ನಟನ ಜೊತೆಗೆ ವಿಲನ್ ಪಾತ್ರಗಳಲ್ಲಿಯೂ ಸಖತ್ ಆಗಿ ಮಿಂಚುತ್ತಿರುವ ವಿಜಯ್ ಸೇತುಪತಿ, ಬಾಲಿವುಡ್ ಅಂಗಳದಲ್ಲಿ ಖಡಕ್ ವಿಲನ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇಂದು ರಿಲೀಸ್ ಆದ ಪೋಸ್ಟರ್ ನಲ್ಲಿ ದ್ ಡೀಲರ್ ಆಫ್ ಡೆತ್(ಸಾವಿನ ವ್ಯಾಪಾರಿ) ಎಂದು ಬರೆಯಲಾಗಿದೆ. ಈ ಮೂಲಕ ವಿಜಯ್ ಸೇತುಪತಿ ಪಾತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಮೂಡಿದೆ.

ರೆಡ್ ಚಿಲ್ಲೀಸ್ ಎಂಟರ್ ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಗೌರವ ವರ್ಮಾ ಸಹ ನಿರ್ಮಾಪಕರಾಗಿದ್ದಾರೆ. ಅಂದಾಜು 200 ರಿಂದ 220 ಕೋಟಿ ರೂಪಾಯಿ ಬಜೆಟ್ ನ ಸಿನಿಮಾ ಎನ್ನಲಾಗುತ್ತಿದೆ. ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.




Leave a Reply

Your email address will not be published. Required fields are marked *

error: Content is protected !!