ಜವಾನ್ ಟೀಸರ್ ಅಬ್ಬರ

201

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ನಟನೆಯ ಜವಾನ್ ಚಿತ್ರದ ಹಿಂದಿ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳು ಫಿಧಾ ಆಗಿದ್ದಾರೆ. ತಮಿಳು ಸ್ಟಾರ್ ನಿರ್ದೇಶಕ ಅಟ್ಲೆ ಆಕ್ಷನ್ ಕಟ್ ಹೇಳಿರುವ ಜವಾನ್ ಟೀಸರ್ ನೋಡುಗರಿಗೆ ಕಿಕ್ ನೀಡುತ್ತಿದೆ.

2 ನಿಮಿಷ 12 ಸೆಕೆಂಡ್ ಟೀಸರ್ ತುಂಬಾ ಆಕ್ಷನ್ ಆರ್ಭಟವಿದೆ. ಮೊದಲ ಬಾರಿಗೆ ನಟ ಶಾರುಖ್ ಬೋಳು ತಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ನಯನತಾರಾ, ನಟ ವಿಜಯ್ ಸೇತುಪತಿ ಆಕ್ಷನ್ ಇದೆ. ನಟಿ ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶಾರುಖ್ ಪತ್ನಿ ಗೌರಿ ಖಾನ್ ಬಂಡವಾಳ ಹೂಡಿದ್ದಾರೆ. ಗೌರವ್ ವರ್ಮಾ ಸಹ ನಿರ್ಮಾಪಕರಾಗಿದ್ದಾರೆ. ಅನಿರುದ್ಧ್ ಮ್ಯೂಸಿಕ್, ಜಿಕೆ ವಿಷ್ಣು ಕ್ಯಾಮೆರಾ ವರ್ಕ್ ಇದೆ. ಸೆಪ್ಟೆಂಬರ್ 7ರಂದು ಜವಾನ್ ಚಿತ್ರ ರಿಲೀಸ್ ಆಗುತ್ತಿದೆ.




Leave a Reply

Your email address will not be published. Required fields are marked *

error: Content is protected !!