Search

ಜವಾನ್ ಚಿತ್ರದ ವಿಡಿಯೋ ಲೀಕ್, ಕೋರ್ಟ್ ಸೂಚನೆ

128

ಪ್ರಜಾಸ್ತ್ರ ಸುದ್ದಿ

ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ನಟನೆಯ ಜವಾನ್ ಚಿತ್ರದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ. ಈ ಕುರಿತು ದೆಹಲಿ ಹೈಕೋರ್ಟ್ ನೋಟಿಸ್ ನೀಡಿದೆ.

ಸೋಷಿಯಲ್ ಮೀಡಿಯಾ, ಕೆಲ ವೆಬ್ ಸೈಟ್, ಕೇಬಲ್ ಟಿವಿಗಳಲ್ಲಿ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಶಾರುಖ್ ಪತ್ನಿ ಗೌರಿ ಖಾನ್ ಒಡೆತನದ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ಎಂಟರ್ ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ದೆಹಲಿ ಹೈಕೋರ್ಟ್ ನಲ್ಲಿ ದೂರು ದಾಖಲಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಹರಿಶಂಕರ್ ಅವರ ಪೀಠ, ಯುಟ್ಯೂಬ್, ಗೂಗಲ್, ಟ್ವಿಟ್ಟರ್, ವೆಬ್ ಸೈಟ್ ಗಳಲ್ಲಿ ಲೀಕ್ ಆದ ವಿಡಿಯೋ ತುಣುಕುಗಳನ್ನು ತೆಗೆದು ಹಾಕುವಂತೆ ಸೂಚನೆ ನೀಡಲಾಗಿದೆ. ಇದು ಅನಧಿಕೃತ ಪ್ರಸರಣ ಪ್ರಚಾರ ಹಾಗೂ ಶೋಷಣೆಯ ಹಕ್ಕುಗಳಿಗೆ ಧಕ್ಕೆ ತರುತ್ತೆ ಎಂದಿದೆ.

ಖ್ಯಾತ ನಿರ್ದೇಶಕ ಅಟ್ಲಿ ಆಕ್ಷನ್ ಕಟ್ ಹೇಳುತ್ತಿರುವ ಜವಾನ್ ಚಿತ್ರದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ನಯನತಾರಾ, ಪ್ರಿಯಾಮಣಿ, ಯೋಗಿ ಬಾಬು ಸೇರಿ ದೊಡ್ಡ ತಾರಾ ಬಳಗವಿದೆ. ಜೂನ್ ನಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!