ಬಿಗಿ ಕ್ರಮದ ಹೆಸರಿನಲ್ಲಿ ರಾಜ್ಯದಲ್ಲಿ 15 ಲಾಕ್ ಡೌನ್ ಘೋಷಿಸಿದ ಸರ್ಕಾರ

283

ಪ್ರಜಾಸ್ತ್ರ ಸದ್ದಿ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕಿನ ಪ್ರಮಾಣ ತುಂಬಾ ಏರಿಕೆಗತಿಯಲ್ಲಿ ಇರುವುದ್ರಿಂದ ರಾಜ್ಯ ಸರ್ಕಾರ 15 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದೆ. ಈ ಬಗ್ಗೆ ಮಾತ್ನಾಡಿರುವ ಸಿಎಂ ಬಿ.ಎಸ್ ಯಡಿಯೂರಪ್ಪ, ಮಂಗಳವಾರ ಸಂಜೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಮಂತ್ರಿ ಮಂಡಲದ ಸಭೆಯ ಬಳಿಕ ವಿಧಾನಸೌಧದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿದ ಸಿಎಂ, ಮಹಾರಾಷ್ಟ್ರವನ್ನ ಮೀರಿ ಕೋವಿಡ್ ರಾಜ್ಯದಲ್ಲಿ ಜಾಸ್ತಿಯಾಗ್ತಿದೆ. ಸಚಿವ ಸಂಪುಟದ ಸಚಿವರು, ತಜ್ಞರ ಜೊತೆಗೆ ಚರ್ಚೆ ಮಾಡಿ ಕೆಲವು ನಿರ್ಧಾರಕ್ಕೆ ಬರಲಾಗಿದೆ ಎಂದರು. ಸರ್ಕಾರಿ ಆಸ್ಪತ್ರೆಗಳಲ್ಲಿ 18-45 ವಯಸ್ಸಿನ ಜನರಿಗೆ ಉಚಿತ ಲಸಿಕೆ ವಿತರಣೆ ನೀಡಲಾಗುವುದು. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಉಚಿತ ಲಸಿಕೆ ಕೊಡಲಾಗಿದೆ.

ಮಂಗಳವಾರ ರಾತ್ರಿಯಿಂದ 14 ದಿನಗಳ ಕಾಲ ಬಿಗಿ ಕ್ರಮ ಇಡೀ ರಾಜ್ಯಕ್ಕೆ ಅನ್ವಯವಾಗುತ್ತೆ. ಬೆಳಗ್ಗೆ 6ಗಂಟೆಯಿಂದ 10ಗಂಟೆಯ ತನಕ ಅಗತ್ಯ ಸೇವೆಗಳಿಗೆ ಅವಕಾಶ. 10 ಗಂಟೆಯ ಬಳಿಕ ಎಲ್ಲವೂ ಬಂದ್ ಆಗಬೇಕು. ಗಾರ್ಮೆಂಟ್ಸ್ ನೌಕರರನ್ನ ಬಿಟ್ಟು, ಕೃಷಿ, ಕಟ್ಟಡ ಸೇವೆ ಇರುತ್ತೆ. ರಾತ್ರಿ 9ಗಂಟೆಯಿಂದ 6ಗಂಟೆಯ ತನಕ ನೈಟ್ ಕರ್ಫ್ಯೂ. ತಹಶೀಲ್ದಾರ್, ಜಿಲ್ಲಾಧಿಕಾರಿಗಳು ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕು ಎಂದರು.

ಎರಡು ವಾರಗಳಲ್ಲಿ ಕರೋನಾ ಕಂಟ್ರೋಲ್ ಆಗ್ಲಿಲ್ಲವೆಂದರೆ ಮತ್ತೆ ಮುಂದುವರೆಯುವ ಸಾಧ್ಯತೆ ಇದೆ. ಹೀಗಾಗಿ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು. ಗೂಡ್ಸ್ ಸರ್ವಿಸ್ ಇದೆ. ಆದ್ರೆ, ಸಾರಿಗೆ ಬಸ್ ಸೇವೆ ಇಲ್ಲ.




Leave a Reply

Your email address will not be published. Required fields are marked *

error: Content is protected !!