ಲಾಕ್ ಡೌನ್ ಮಾಡಿ ಜೀವನಕ್ಕೆ ಏನ್ ಕೊಡ್ತೀರಾ..?

258

ಪ್ರಜಾಸ್ತ್ರ ಸದ್ದಿ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿವೆ. ಅದನ್ನ ಕಂಟ್ರೋಲ್ ಮಾಡಲು ಹೆಣಗಾಡ್ತಿರುವ ಸರ್ಕಾರ, ಪದೆಪದೆ ಲಾಕ್ ಡೌನ್ ಮೊರೆ ಹೋಗ್ತಿದೆ. ಇದೊಂದೇ ಪರಿಹಾರ ಅನ್ನೋ ರೀತಿಯಲ್ಲಿ ವರ್ತಿಸ್ತಿದೆ. ಈಗ ಮುಂದಿನ 15 ದಿನಗಳ ಕಾಲ ರಾಜ್ಯವನ್ನ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು ಮುಂದಾಗಿದೆ.

ಲಾಕ್ ಡೌನ್ ಮಾಡಿದ್ರೆ ಜನರು ಬದುಕುವುದು ಹೇಗೆ? ದುಡಿಮೆ ಇಲ್ಲದೆ ಅವರು ಜೀವನ ನಡೆಸುವುದು ಹೇಗೆ? ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡ್ತೀರಾ, ಆದ್ರೆ, ಅದನ್ನ ಖರೀದಿಸಲು ಜನರ ಬಳಿ ದುಡ್ಡು ಇರಬೇಕಲ್ವೆ? ಬೆಲೆ ಏರಿಕೆಯಿಂದ ಸಾಯುತ್ತಿರುವ ಜನರು ದುಡಿಮೆ ಇಲ್ಲದೆ ಮನೆಯಲ್ಲಿ ಎಷ್ಟು ದಿನ ಬದುಕಲು ಸಾಧ್ಯ ಅನ್ನೋ ಹತ್ತಾರು ಪ್ರಶ್ನೆಗಳು ಎದುರಾಗಿವೆ.

ಹಿಂದಿನ ಸರ್ಕಾರ ನೀಡ್ತಿದ್ದ ಪಡಿತರಲ್ಲಿ ಕಡಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದಿಂದ ಘೋಷಣೆಯಾಗಿರುವ ಪಡಿತರವೇ ನೀಡ್ತಿಲ್ಲ. ರಾಜ್ಯ ಸರ್ಕಾರ ಕಳೆದ ಬಾರಿ ಹಲವು ವಲಯಗಳಿಗೆ ಘೋಷಣೆ ಮಾಡಿದ ಆರ್ಥಿಕ ಪರಿಹಾರವೇ ಇನ್ನು ಅದೆಷ್ಟೋ ಜನರಿಗೆ ಸಿಕ್ಕಿಯೇ ಇಲ್ಲ. ಹೀಗಿರುವಾಗಿ ಮುಂದಿನ 15 ದಿನಗಳನ್ನ ಅವರನ್ನ ಮನೆಯಲ್ಲಿ ಬಂಧಿಸಿದ್ರೆ ಹೇಗೆ ಅನ್ನೋದಕ್ಕೆ ಸರ್ಕಾರ ಮೊದಲು ಉತ್ತರಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!