ಜಡೇಜಾ ಕಮಾಲ್.. ಆಸೀಸ್ ಆಲೌಟ್

250

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದ ಮೊದಲ ದಿನವೇ ಆಸೀಸ್ ಪಡೆಯನ್ನು ಭಾರತ ಕಟ್ಟಿ ಹಾಕಿದೆ. ಗಾಯದ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆ ಪಡೆದು ಬಂದ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಭರ್ಜರಿ ಬೌಲಿಂಗ್ ಮಾಡಿ 5 ವಿಕೆಟ್ ಪಡೆದು ಮಿಂಚಿದರು.

ಆರಂಭದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿತ್ತು. ನಂತರ ಆಸೀಸ್ ಒಂದಿಷ್ಟು ಚೇತರಿಸಿಕೊಂಡಿತು. ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲ್ಯಾಬುಶೈ 82 ರನ್ ಗಳ ಜೊತೆಯಾಟವಾಡಿದರು. ಊಟದ ವಿರಾಮದ ಬಳಿಕ ಭಾರತದ ಬೌಲರ್ ಗಳ ಎದುರು ಕಮಿನ್ಸ್ ಪಡೆ ಮುಗ್ಗರಿಸಿತು. ಮಾರ್ನಸ್ 49, ಸ್ಮಿತ್ 37, ಅಲೆಕ್ಸ್ 36, ಪೀಟರ್ 31 ರನ್ ಗರಿಷ್ಠ ಸ್ಕೋರ್ ಆಗಿವೆ. ಉಳಿದವರು ಒಂದಂಕಿ ದಾಟಲು ಆಗದೆ ಹೋದರು. ಹೀಗಾಗಿ ಆಸ್ಟ್ರೇಲಿಯಾ 63.5 ಓವರ್ ಗಳಲ್ಲಿ 177 ರನ್ ಗಳಿಗೆ ಆಲೌಟ್ ಆಯಿತು.

ಟೀಂ ಇಂಡಿಯಾ ಪರವಾಗಿ ಜಡೇಜಾ 22 ಓವರ್ ಮಾಡಿ 47 ರನ್ ನೀಡಿ ಬರೋಬ್ಬರಿ 5 ವಿಕೆಟ್ ಕಬಳಿಸಿದರು. ಇವರಿಗೆ ಅಶ್ವಿನ್ ಸಾಥ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಶಮಿ ಹಾಗೂ ಸಿರಾಜ್ ತಲಾ 1 ವಿಕೆಟ್ ಪಡೆದರು. ಭಾರತ ಬ್ಯಾಟ್ ನಡೆಸಿದ್ದು, ಕೆ.ಎಲ್ ರಾಹುಲ್ 20 ರನ್ ಗಳಿಗೆ ಔಟ್ ಆಗಿದ್ದಾರೆ. ನಾಯಕ ಶರ್ಮಾ 56, ಅಶ್ವಿನ್ 0 ರನ್ ಗಳೊಂದಿಗೆ ಕ್ರಿಸ್ ನಲ್ಲಿ ಉಳಿದಿದ್ದಾರೆ. 1 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದ್ದು, ದಿನದಾಟ ಅಂತ್ಯವಾಗಿದೆ.




Leave a Reply

Your email address will not be published. Required fields are marked *

error: Content is protected !!