ಆಸೀಸ್ ಎದುರು ಮುಗ್ಗರಿಸಿದ ರೋಹಿತ್ ಬಳಗ

137

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಓವಲ್: ಇಂಡಿಯನ್ ಕ್ರಿಕೆಟ್ ಪ್ರೇಮಿಗಳು ಸಾಕಷ್ಟು ಕುತೂಹಲದಿಂದ ಕಳೆದ ಐದು ದಿನಗಳಿಂದ ನೋಡುತ್ತಿದ್ದ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಹೀನಾಯವಾಗಿ ಸೋತಿದೆ. ಆಸೀಸ್ ಪಡೆ 209 ರನ್ ಗಳ ಬೃಹತ್ ಅಂತರೆದ ಗೆಲುವು ಸಾಧಿಸಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 469 ರನ್ ಗಳಿಗೆ ಆಲೌಟ್ ಆಯಿತು. ಸ್ಟೀವ್ ಸ್ಮಿತ್ 121, ಟ್ರೇವಸ್ ಹೆಡ್ 163 ರನ್ ಗಳ ಭರ್ಜರಿ ಆಟವಾಡಿದ್ದರು. ಇಂಡಿಯಾ ಪರ ಸಿರಾಜ್ 4, ಶಮಿ 2, ಶ್ರಾದ್ಧೂಲ್ ಠಾಕೂರ್ 2 ವಿಕೆಟ್ ಪಡೆದು ಮಿಂಚಿದ್ದರು. ಜಡೇಜಾ 1 ವಿಕೆಟ್ ಪಡೆದಿದ್ದರು.

ಮೊದಲ ಇನ್ನಿಂಗ್ಸ್ ಆಡಿದ ಭಾರತ 296 ರನ್ ಗಳಿಗೆ ಆಲೌಟ್ ಆಯಿತು. ರಹಾನೆ 89, ಠಾಕೂರ್ 51 ಜಡೇಜಾ 48 ರನ್ ಗರಿಷ್ಠ ಸ್ಕೋರ್. ಉಳಿದಂತೆ ನಾಯಕ ರೋಹಿತ್, ಕೊಹ್ಲಿ, ಗಿಲ್, ಪೂಜಾರ್ ಎಲ್ಲರೂ ಫೇಲ್ ಆದರು. ಆಸೀಸ್ ಪರ ಕಮಿನ್ಸ್ 3, ಸ್ಟ್ರಾಕ್, ಬ್ಲಂಡ್, ಗ್ರೀನ್ ತಲಾ 2 ವಿಕೆಟ್ ಪಡೆದರೆ ಲೇಯಾನ್ 1 ವಿಕೆಟ್ ಪಡೆದರು.

2ನೇ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ಗೆ 270 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ 444 ರನ್ ಟಾರ್ಗೆಟ್ ನೀಡಿತು. ಇಲ್ಲಿ ಜಡೇಜಾ 3, ಶಮಿ, ಯಾದವ್ ತಲಾ 2 ವಿಕೆಟ್ ಪಡೆದರು. ಸಿರಾಜ್ 1 ವಿಕೆಟ್ ಪಡೆದರು. ಈ ಸ್ಕೋರ್ ಚೇಸ್ ಮಾಡಿದ ಟೀಂ ಇಂಡಿಯಾ ಕೇವಲ 234 ರನ್ ಗಳಿಗೆ ಆಲೌಟ್ ಆಗಿ ಸೋಲು ಅನುಭವಿಸಿತು. ರೋಹಿತ್ 49, ಕೊಹ್ಲಿ 49, ರಹಾನೆ 46 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಆಸೀಸ್ ಪರ ಲೇಯಾನ್ 4, ಬ್ಲಂಡ್ 3 ವಿಕೆಟ್ ಪಡೆದು ಮಿಂಚಿದರು. ಸ್ಟ್ರಾಕ್ 2, ಕಮಿನ್ಸ್ 1 ವಿಕೆಟ್ ಪಡೆದರು. ಟ್ರೇವಿಸ್ ಹೆಡ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.




Leave a Reply

Your email address will not be published. Required fields are marked *

error: Content is protected !!