ಬೋರ್ಡ್ ನೋಡಿ ಯಾಮಾರಬೇಡಿ…

438

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಹೃಯದ ಭಾಗದಲ್ಲಿ ತಾಲೂಕು ಆಡಳಿತ ಕಚೇರಿ ಇದೆ. ನಿತ್ಯ ಸಾವಿರಾರು ಜನರು ಇಲ್ಲಿಗೆ ಬರ್ತಾರೆ. ಹೀಗೆ ಬರುವವರಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಶೌಚಾಲಯದ ವ್ಯವಸ್ಥೆಯೇ ಇಲ್ಲ. ಅರೆ, ನೀವೇನು ಹೀಗೆ ಹೇಳುತ್ತಿದ್ದೀರಿ. ತಹಶೀಲ್ದಾರ್ ಕಚೇರಿ ಆವರಣದ ಹಲವು ಕಡೆ ಶೌಚಾಲಯದ ಬೋರ್ಡ್ ಹಾಕಿದ್ದಾರೆ. ನೀವು ನೋಡಿದ್ರೆ ವ್ಯವಸ್ಥೆ ಇಲ್ಲ ಅಂತೀರಲ್ಲ ಎಂದು ಕೇಳಬಹುದು. ಆದ್ರೆ, ವಾಸ್ತವ ಬೇರೆಯಿದೆ.

ತಾಲೂಕು ಆಡಳಿತ ಕಚೇರಿಯ ಎರಡು ಗೇಟ್ ಬಳಿ ಶೌಚಾಲಯಕ್ಕೆ ಹೋಗುವ ದಾರಿ ಎಂದು ಬೋರ್ಡ್ ಹಾಕಿದ್ದಾರೆ ನಿಜ. ಆದ್ರೆ, ಶೌಚಾಲಯ ಯಾವಾಗ್ಲೂ ಮುಚ್ಚಿಯೇ ಇರುತ್ತೆ. ಹೀಗಾಗಿ ಕಚೇರಿಗೆ ಬರುವ ಸಾರ್ವಜನಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡಿ ಹೋಗ್ತಿದ್ದಾರೆ. ಗಂಡ್ಮಕ್ಕಳು ನಾಚಿಕೆ ಬಿಟ್ಟು ಕಾಂಪೌಂಡ್, ಮರದ ಮರೆಯಲ್ಲಿ ಮೂತ್ರ ವಿಸರ್ಜನೆ ಮಾಡ್ತಾರೆ. ಆದ್ರೆ, ಹೆಣ್ಮಕ್ಕಳ ಪರಿಸ್ಥಿತಿ ಬಗ್ಗೆ ಯೋಚಿಸುವುದು ಬೇಡ್ವೆ?

ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ಸೂಕ್ತ ಶೌಚಾಲಯದ ವ್ಯವಸ್ಥೆಯಿಲ್ಲವೆಂದು ಮಾಧ್ಯಮಗಳಲ್ಲಿ ಹಲವು ಬಾರಿ ಸುದ್ದಿ ಬಂದಿದೆ. ಆದ್ರೆ, ಪುರಸಭೆ ಅಧಿಕಾರಿಗಳ ಗಮನ ಈ ಕಡೆ ಇರುವುದಿಲ್ಲ. ಟೆಂಡರ್ ಕರೆಯುತ್ತಾರೋ.. ಕರೆಯುವುದಿಲ್ವೋ.. ಟೆಂಡರ್ ಹೆಸರಿನಲ್ಲಿ ಹಣ ಲೂಟಿ ಮಾಡ್ತಿದ್ದಾರೋ ಒಂದೂ ಗೊತ್ತಿಲ್ಲ ಅಂತಿದ್ದಾರೆ ಸ್ಥಳೀಯರು.

ಇನ್ನು ಇಲ್ಲಿ ಬರೆದಿರುವ ಬೋರ್ಡ್ ಸಹ ಖಾಸಗಿ ಸೇವಾ ಸಂಸ್ಥೆ. ಪುರಸಭೆಯ ಅಧಿಕಾರಿಗಳ ಅಂದರ್ ಬಾಹರ್ ಆಟದಿಂದಾಗಿ ಸಾರ್ವಜನಿಕರು ಅನಾಗರೀಕರಂತೆ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡ್ತಿದ್ದಾರೆ. ಈ ಸಂಬಂಧ ತಾಲೂಕು ಆಡಳಿತ ಅಧಿಕಾರಿಗಳ ಆದಿಯಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.




Leave a Reply

Your email address will not be published. Required fields are marked *

error: Content is protected !!