ಇಂಡಿಯಾ-ಆಸೀಸ್ ಟಿ-20 ಸರಣಿ

245

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಏಕದಿನ ವಿಶ್ವಕಪ್-2023 ಟೂರ್ನಿ ಬಳಿಕ ಟೀಂ ಇಂಡಿಯಾ ಮತ್ತೊಂದು ಸರಣಿಗೆ ಸಜ್ಜಾಗಬೇಕಿದೆ. ಈ ಮೂಲಕ ಸತತವಾಗಿ ಬಿಡುವಿಲ್ಲದೆ ಮೈದಾನದಲ್ಲಿ ಬೆವರು ಹರಿಸಬೇಕಾಗಿದೆ. ವರ್ಲ್ಡ್ ಕಪ್ ಬಳಿಕ ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿ ನಡೆಯಲಿದೆ.

ಭಾರತ ವಿರುದ್ಧ ಚುಟುಕು ಪಂದ್ಯದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟಿಸಿದೆ. ಮ್ಯಾಥ್ಯೂ ವೇಡ್ ನಾಯಕತ್ವದಲ್ಲಿ ಟೀಮ್ ಡೇವಿಡ್, ಟ್ರಾವಿಸ್ ಹೆಡ್, ಜೇಸನ್ ಬೆಹ್ರನ್ ಡಾರ್ಫ್, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಗ್ಲೇನ್ ಮ್ಯಾಕ್ಸ್ ವೆಲ್, ಸ್ಪೆನ್ಸರ್ ಜಾನ್ಸನ್, ಮ್ಯಾಟ್ ಶರ್ಟ್, ತನ್ವೀರ್ ಸಂಘ್, ಮಾರ್ಕ್ ಸ್ಟೊಯಿನಸ್, ಡೇವಿಡ್ ವಾರ್ನರ್, ಸ್ವೀವ್ ಸ್ಮಿತ್, ಆಡಂ ಜಂಪಾ 15 ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ವರ್ಲ್ಡ್ ಕಪ್ ಬಳಿಕ ಆಯ್ಕೆ ಆದ ಆಟಗಾರರು ಭಾರತದಲ್ಲಿಯೇ ಉಳಿದುಕೊಳ್ಳಲಿದ್ದಾರೆ. ನವೆಂಬರ್ 23 ವಿಶಾಖಪಟ್ಟಣ, ನವೆಂಬರ್ 26 ತಿರುವನಂತಪುರಂ, ನವೆಂಬರ್ 28 ಗುವಾಹಟಿ, ಡಿಸೆಂಬರ್ 1 ನಾಗ್ಪುರ್, ಡಿಸೆಂಬರ್ 3 ಹೈದ್ರಾಬದ್ ಹೀಗೆ 5 ಟಿ-20 ಪಂದ್ಯಗಳು ನಡೆಯಲಿವೆ.




Leave a Reply

Your email address will not be published. Required fields are marked *

error: Content is protected !!