ಅ.21ಕ್ಕೆ ಹೆಡ್ ಬುಷ್ ರಿಲೀಸ್

228

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾ ಅಕ್ಟೋಬರ್ 21ಕ್ಕೆ ರಿಲೀಸ್ ಆಗುತ್ತಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಭೂಗತ ಜಗತ್ತಿನಲ್ಲಿ ಮೆರೆದ
ಜಯರಾಜ್ ಕಥೆ ತೆರೆಯ ಮೇಲೆ ಬರುತ್ತಿದೆ.

ಅಗ್ನಿ ಶ್ರೀಧರ್ ಚಿತ್ರಕಥೆ ಬರೆದಿದ್ದಾರೆ. ಶೂನ್ಯ ನಿರ್ದೇಶನ ಮಾಡಿದ್ದಾರೆ. ಡಾಲಿ ಧನಂಜಯ್ ಹಾಗೂ ರಾಮ್ಕೋ ಸೋಮಣ್ಣ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಡಾಲಿ ನಟನೆಯ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.

ಜಯರಾಜ್ ಮಗ ಅಜಿತ್ ಇತ್ತೀಚೆಗೆ ಈ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಒಂದಿಷ್ಟು ವಿಚಾರಗಳನ್ನು ಎತ್ತಿದ್ದಾರೆ. ಅದು ಬೇರೆ ಬೇರೆ ಸ್ವರೂಪ ಪಡೆದುಕೊಂಡು, ಅಗ್ನಿ ಶ್ರೀಧರ್, ಡಾಲಿ ಎಲ್ಲರೂ ಮಾತನಾಡಿದರು. ಇದೀಗ ಚಿತ್ರ ರಿಲೀಸ್ ಗೆ ರೆಡಿಯಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!