ಮಾದಕ ವಸ್ತು ಪ್ರಕರಣದಲ್ಲಿ ನನ್ನ ಟಾರ್ಗೆಟ್: ನಟಿ ರಾಗಿಣಿ

301

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ವಿಜಯಪುರ: ಸಿನಿಮಾ ರಂಗ ಮಾತ್ರವಲ್ಲ ಪ್ರತಿಯೊಂದು ಕ್ಷೇತ್ರದಲ್ಲಿ ಹೆಣ್ಮಕ್ಕಳ ಮೇಲೆ ಸುಲಭವಾಗಿ ಆರೋಪ ಮಾಡಬಹುದು. ಇಂತಹ ಮನೋಭಾವ ಈ ಸಮಾಜದಲ್ಲಿದೆ. ಹೀಗಾಗಿಯೇ ಮಾದಕ ವಸ್ತು ಪ್ರಕರಣದಲ್ಲಿ ನೂರಕ್ಕೆ ನೂರರಷ್ಟು ನನ್ನನ್ನ ಟಾರ್ಗೆಟ್ ಮಾಡಲಾಗಿದೆ ಎಂದು ತುಪ್ಪದ ಬೆಡಗಿ ನಟಿ ರಾಗಿಣಿ ಹೇಳಿದ್ರು.

ಕೋವಿಡ್ ಲಸಿಕೆ ಜಾಗೃತಿ ಅಭಿಯಾನ ಸಂಬಂಧ ವಿಜಯಪುರಕ್ಕೆ ಆಗಮಿಸಿದ್ದರು. ಈ ವೇಳೆ ಮಾತ್ನಾಡಿದ ಅವರು,  ಯಾರೇ ಏನೇ ದೂರು ಆರೋಪ ಮಾಡಿದರೂ ಜನರ ಪ್ರೀತಿ ನನ್ನ ಮೇಲಿದೆ. ಸಂಬಂರಗಿ ಯಾರೆಂದು ನನ್ಗೆ ಗೊತ್ತಿಲ್ಲ. ಅಂಥವರು ನಮ್ಮಂಥವರನ್ನ ನಿಯಂತ್ರಿಸಲು ಸಾಧ್ಯವಿಲ್ಲ. ಕಷ್ಟ ಕಾಲದಲ್ಲಿ ನನ್ನನ್ನ ಇಷ್ಟಪಟ್ಟವರಿಗೆ, ಪಡದವರಿಗೆ ಧನ್ಯವಾದಗಳು ಅಂತಾ ಹೇಳಿದ್ರು.

ಕಾಸ್ಟಿಂಗ್ ಕೌಚ್ ಅನ್ನೋ ಸ್ಟುಪಿಡ್ ವರ್ಡ್. ಜೀವನದಲ್ಲಿ ಎರಡು ಥರ ಇದೆ. ಒಂದು ಶಾರ್ಟ್ ಕಟ್. ಮತ್ತೊಂದು ಲಾಂಗ್ ಲೈಫ್. ಕಷ್ಟಪಟ್ಟರೆ ಜೀವನಪೂರ್ತಿ ಬೆಳಿತೀವಿ ಅಂತಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!