ರಾಗಿಣಿ ಜೈಲುವಾಸ ಮುಂದುವರಿಕೆ

256

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಂದನವನದಲ್ಲಿ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ಮತ್ತೆ ಮುಂದೂಡಿಕೆಯಾಗಿದೆ. ಇದರೊಂದಿಗೆ ನಟಿ ಸೋಮವಾರದ ತನಕ ಜೈಲುವಾಸ ಮುಂದುವರಿಸಬೇಕಿದೆ.

ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ರು. ನಟಿ ಪರ ಶಾಹಿಲ್ ಭಾಲೈಕ್ ವಾದ ಮಾಡಿದ್ರು. ಸಿಸಿಬಿ ಪರ ತುಷಾರ ಮೆಹ್ತಾ ವಾದ ಮಾಡಿದ್ರು. ನಟಿ ವಿರುದ್ಧ ಎನ್ ಡಿಪಿಎಸ್ ಆ್ಯಕ್ಟ್ 27 ಅಡಿಯಲ್ಲಿ ಕೇಸ್ ದಾಖಲಾಗಿದೆ. ಅವರಿಗೆ ಜಾಮೀನು ನೀಡಬೇಡಿ ಎಂದರು. ವಾದ, ಪ್ರತಿವಾದ ಕೇಳಿದ ಸುಪ್ರೀಂ ಕೋರ್ಟ್ ಸೋಮವಾರಕ್ಕೆ ವಿಚಾರಣೆಯನ್ನ ಮುಂದೂಡಿದೆ.




Leave a Reply

Your email address will not be published. Required fields are marked *

error: Content is protected !!