ಡ್ರಗ್ಸ್ ಪ್ರಕರಣ: ಶಾರೂಖ್ ಪುತ್ರನಿಗೆ ಕ್ಲೀನ್ ಚಿಟ್

361

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಐಷಾರಾಮಿ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆದಿದೆ ಅನ್ನೋ ಪ್ರಕರಣಕ್ಕೆ ಸಂಬಂದಿಸಿದಂತೆ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಬಂಧನವಾಗಿತ್ತು. ನಂತರ ಜಾಮೀನು ಮೇಲೆ ಬಿಡುಗಡೆಯಾದ. ಇಂದು ಎನ್ ಸಿಬಿ ಈ ಪ್ರಕರಣದಲ್ಲಿ ಶಾರೂಖ್ ಪುತ್ರನಿಗೆ ಕ್ಲೀನ್ ಚಿಟ್ ನೀಡಿದೆ.

ಡ್ರಗ್ಸ್ ನಿಗ್ರಹ ದಳ 6 ಸಾವಿರ ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿತ್ತು. ಇದರಲ್ಲಿ 14 ಮಂದಿಯನ್ನು ಆರೋಪಿಗಳನ್ನಾಗಿ ಮಾಡಿತ್ತು. ಆದರೆ, ಇದೀಗ ಕೋರ್ಟಿಗೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಆರ್ಯನ್ ಖಾನ್ ಹೆಸರಿಲ್ಲ.

ಕಳೆದ ಅಕ್ಟೋಬರ್ 28ರಂದು ಮುಂಬೈ ಹೈಕೋರ್ಟ್ ಆರ್ಯನ್ ಸೇರಿ ಮೂವರು ಆರೋಪಿಗಳಿಗೆ ಜಾಮೀನು ನೀಡಿದೆ. ಈ ಪ್ರಕರಣದಲ್ಲಿ ಇವರು ತೊಡಗಿಸಿಕೊಂಡಿದ್ದಾರೆ ಅನ್ನೋದಕ್ಕೆ ಬಲವಾದ ಸಾಕ್ಷಿಗಳು ಇಲ್ಲವೆಂದು ತಿಳಿಸಲಾಗಿತ್ತು. ಇದೀಗ ಕ್ಲೀನ್ ಚಿಟ್ ಸಿಕ್ಕಿದೆ. ಎಲ್ಲಿಗೆ ಶಾರೂಖ್ ಪುತ್ರ ಬಚಾವ್ ಆಗಿದ್ದಾನೆ.




Leave a Reply

Your email address will not be published. Required fields are marked *

error: Content is protected !!