ದಾವೋಸ್ ನಿಂದ ಬಂದ ಸಿಎಂ ಹೂಡಿಕೆ ಬಗ್ಗೆ ಏನಂದರು?

186

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಲು ಸ್ವಿಟ್ಜರ್ ಲೆಂಡ್ ನ ದಾವೋಸ್ ಗೆ ಪ್ರಯಾಣ ಬೆಳೆಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಾಪಸ್ ಆಗಿದ್ದಾರೆ. 6 ದಿನಗಳ ಪ್ರವಾಸದ ಬಳಿಕ ಸಚಿವ ಮುರುಗೇಶ್ ನಿರಾಣಿ, ಅಶ್ವಥ್ ನಾರಾಯಣ್ ಹಾಗೂ ಹಿರಿಯ ಅಧಿಕಾರಿಗಳು ವಾಪಸ್ ಆದರು.

ಈ ವೇಳೆ ಇಂಧನ ಸಚಿವ ವಿ.ಸುನೀಲ್ ಕುಮಾರ್, ಗುಪ್ತಚರ ಇಲಾಖೆ ಎಡಿಜಿಪಿ ದಯಾನಂದ್ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಈ ಪ್ರವಾಸದಿಂದ 5 ಲಕ್ಷ ಕೋಟಿ ಬಂಡಾವಳ ಹೂಡಿಕೆಯ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ತೈಲ ಬಗ್ಗೆ ಚರ್ಚೆಯಾಗಿದೆ. ಅಲ್ಲಿ ಅತೀ ಆಕರ್ಷಣೆಯಾಗಿರುವುದು ಕರ್ನಾಟಕದ ಪೆವಿಲಿಯನ್. ಬೆಳಗ್ಗೆ 10ರಿಂದ ಸಂಜೆ 7 ಗಂಟೆಯ ತನಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಹಲವಾರು ಕಂಪನಿಗಳು ಹೂಡಿಕೆ ಮಾಡಲು ಆಸಕ್ತಿ ಹಾಗೂ ಭರವಸೆ ನೀಡಿದ್ದಾರೆ. ಈಗಾಗ್ಲೇ 700 ಕೋಟಿಗೆ ಒಂದು ಸಂಸ್ಥೆ ಬಂದಿದೆ. ಹಿಟಾಚಿ ಕಂಪನಿಯು ಮುಂದೆ ಬಂದಿದೆ. 2 ಸಾವಿರ ಇಂಜನಿಯರ್ಸ್ ಗೆ ಜಾಬ್ ನೀಡುವುದಾಗಿ ಹೇಳಿದ್ದಾರೆ.

ಸಿಮನ್ಸ್ ಹೆಲ್ತ್ ಕೇರ್ 1,300 ಕೋಟಿ ಬಂಡಾವಳ ಹೂಡಿಕೆಗೆ ಮುಂದಾಗಿದ್ದಾರೆ. ಇವರು ಸಹ 2,500 ಎಂಜಿನಿಯರ್ಸ್

ಲೂಲು ಗ್ರೂಪ್ 2 ಸಾವಿರ ಕೋಟಿ ರೂಪಾಯಿ ಬಂಡಾವಳ ಹೂಡಿಕೆ ಮಾಡುತ್ತೇವೆ ಎಂದಿದ್ದಾರೆ. ಇರೋ ಗ್ರೂಪ್ ನವರು ಎಲೆಕ್ಟ್ರಿಕಲ್ ಬೈಕ್ ಗಳು ಬರಲಿವೆ ಎಂದಿದ್ದಾರೆ. ಎಬಿ ಇನ್ ವೀವ್ ಅನ್ನೋ ಕಂಪನಿ ಈಗಾಗ್ಲೇ ಮೈಸೂರಿನಲ್ಲಿದ್ದಾರೆ.. ಅವರು ನಾನ್ ಅಲ್ಕೋಹಾಲಿಕ್, ನೆಸ್ಲೆ ಕಂಪನಿಯವರು ನಂಜನಗೂಡಿನಲ್ಲಿ 700 ಕೋಟಿ ರೂಪಾಯಿ ಬೀಯರ್ ತಯಾರಿಕೆ, ಸ್ಪೈಡರ್ ಎಲೆಕ್ಟ್ರಿಕಲ್ ನವರು 300 ಕೋಟಿ ಬಂಡವಾಳಕ್ಕೆ ಮುಂದೆ ಬಂದಿದ್ದಾರೆ.

ಅಸ್ಟ್ಲರ್ ಮಿಥಲ್ ಅವರು 6 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸೋಲರ್ ನಿರ್ಮಿಸಲ ಮುಂದೆ ಬಂದಿದ್ದಾರೆ. ಹೀಗೆ ಹಲವು ಕಂಪನಿಗಳ ಹೆಸರು ಹಾಗೂ ಹೂಡಿಕೆ ಮಾಡುತ್ತಿರುವ ಬಂಡವಾಳದ ಕುರಿತು ಮಾಹಿತಿಯನ್ನು ನೀಡಿದರು.




Leave a Reply

Your email address will not be published. Required fields are marked *

error: Content is protected !!