ಸಿದ್ಧಾಂತ್ ಕಪೂರ್ ವಿರುದ್ಧ ಕಾನೂನು ಕ್ರಮ

345

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯ ಐಷಾರಾಮಿ ಹೋಟೆಲ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್, ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ ಕಪೂರ್ ಸೇರಿ ಐವರನ್ನು ಬಂಧಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಈಗಾಗ್ಲೇ ಎಲ್ಲರ ರಕ್ತ ಮಾದರಿ ಸೇರಿದಂತೆ ವಿವಿಧ ರೀತಿಯ ತಪಾಸಣೆ ನಡೆಸಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಆರಂಭದಲ್ಲಿ ಹಲಸೂರು ಠಾಣೆ ಪೊಲೀಸರು ಯುವಕ, ಯುವತಿಯರು ಸೇರಿದಂತೆ ಒಟ್ಟು 50 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಅದರಲ್ಲಿ 35 ಜನರನ್ನು ಮೆಡಿಕಲ್ ಟೆಸ್ಟ್ ಮಾಡಿಸಲಾಗಿತ್ತು. ಇದರಲ್ಲಿ ಐವರು ಡ್ರಗ್ಸ್ ಸೇವನೆ ಮಾಡಿರುವುದು ದೃಢವಾಗಿದೆ. ಅದರಲ್ಲಿ ಸಿದ್ಧಾಂತ್ ಕಪೂರ್ ಸಹ ಇದ್ದಾನೆ. ಅಖೀಲ್ ಸೋನಿ, ದರ್ಶನ್ ಸುರೇಶ್, ಅಜೋದ್ ಸಿಂಗ್ ಪಂಜಾಬ್, ಅಖೀಲ್, ಅನಿ ಬಂಧಿತ ಆರೋಪಿಗಳಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!