ಡ್ರಗ್ಸ್ ಕೇಸ್: ಅನುಶ್ರೀ ಬಗ್ಗೆ ಮತ್ತೊಬ್ಬ ಬಂಧಿತ ಹೇಳಿದ್ದೇನು?

287

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಒಬ್ಬನನ್ನ ಬಂಧಿಸಿದ್ದಾರೆ. ಈಗಾಗ್ಲೇ ಬಂಧಿತನಾಗಿರುವ ಕಿಶೋರ ಶೆಟ್ಟಿ ಸ್ನೇಹಿತ ಸ್ಯಾಮ್ ಫರ್ನಾಂಡಿಸ್ ಬಂಧಿತನಾಗಿದ್ದಾನೆ.

ಬಂಧಿತ ಶ್ಯಾಮ್, ನಿರೂಪಕಿ ಅನುಶ್ರೀ ಬಗ್ಗೆ ಕೆಲವೊಂದು ಮಾಹಿತಿ ಹೇಳಿದ್ದಾನಂತೆ. ಕಿಶೋರ ಶೆಟ್ಟಿ ನಡೆಸ್ತಿದ್ದ ಪಾರ್ಟಿಗಳಲ್ಲಿ ಅನುಶ್ರೀ ಭಾಗವಹಿಸಿರುವುದನ್ನ ತಾನು ನೋಡಿರುವುದಾಗಿ ಹೇಳಿದ್ದಾನಂತೆ. ಇದರ ಜೊತೆಗೆ ಬಿಗ್ ಸ್ಕ್ರೀನ್, ಸ್ಮಾಲ್ ಸ್ಕ್ರೀನ್ ನಟ, ನಟಿಯರು, ರಿಯಾಲಿಟಿ ಶೋನ ಸ್ಪರ್ಧಿಗಳು ಸಹ ಭಾಗವಹಿಸಿದ್ರು ಎಂದು ಹೇಳಿದ್ದಾನಂತೆ.

ಒಬ್ಬರಾದ್ಮೇಲೆ ಒಬ್ಬರು ಸಿಸಿಬಿ ಪೊಲೀಸರ ಬಲೆಗೆ ಬೀಳ್ತಿದ್ದು, ಸ್ಫೋಟಕ ಮಾಹಿತಿಗಳು ಹೊರ ಬರುತ್ತಲೇ ಇವೆ. ಇನ್ನು ಯಾರ್ಯಾರು ಅರೆಸ್ಟ್ ಆಗ್ತಾರೆ ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!