ವರುಣನ ಆರ್ಭಟಕ್ಕೆ ತಾರಾಪುರದಲ್ಲಿ 10ಕ್ಕೂ ಹೆಚ್ಚು ಮನೆಗಳು ಕುಸಿತ

374

ಪ್ರಜಾಸ್ತ್ರ ಸುದ್ದಿ

ಆಲಮೇಲ: ಮಳೆರಾಯನ ಆರ್ಭಟದಿಂದಾಗಿ ವಿಜಯಪುರ ಜಿಲ್ಲೆಯ ನೂತನ ತಾಲೂಕು ಆಲಮೇಲ ಗ್ರಾಮದ ತಾರಾಪುರದಲ್ಲಿ ಮನೆಗಳು ಕುಸಿದು ಬಿದ್ದಿವೆ. ತಾರಾಪುರ ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ.

ಕಳೆದ ರಾತ್ರಿಯಿಂದ ಸತತವಾಗಿ ಮಳೆಯಾಗ್ತಿದ್ದು, ಮನೆಗಳ ಗೋಡೆಗಳು‌ ಕುಸಿದು ಬಿದ್ದಿವೆ. ಅದೃಷ್ಟವಷಾತ್ ಯಾವುದೇ ಪ್ರಾಣಿಹಾನಿ ಆಗಿಲ್ಲ. ತಾರಾಪುರ ಗ್ರಾಮ ಸೊನ್ನ ಬ್ರೀಜ್ ಹಿನ್ನಿರಿನಿಂದಾಗಿ ಸ್ಥಳಾಂತರವಾಗಬೇಕಿದ್ದ ಗ್ರಾಮವಾಗಿದ್ದು, ಪ್ರತಿ ವರ್ಷ ಭೀಮಾನದಿಗೆ ಪ್ರವಾಹ ಉಂಟಾದಲ್ಲಿ ತಾರಾಪೂರ ಗ್ರಾಮವನ್ನ ನೀರು ಸುತ್ತುವರೆಯುತ್ತದೆ.

ಇನ್ನು ಇಷ್ಟೆಲ್ಲ ಸಮಸ್ಯೆಯಾಗಿ ಜನರು ಪರದಾಡ್ತಿದ್ದಾರೆ. ಆದ್ರೂ ಸ್ಥಳಕ್ಕೆ ಅಧಿಕಾರಿಗಳು ಬರದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!