ಹೆದ್ದಾರಿ ಅಪಘಾತದ ಆಪತ್ತು: 2019, 2020ರಲ್ಲಿ ಕರೋನಾಗಿಂತ ಹೆಚ್ಚು ಸಾವು

497

ಪ್ರಜಾಸ್ತ್ರ ಸುದ್ದಿ

ನವದೆಹಲಿ: 2020ರಲ್ಲಿ ಎಕ್ಸ್ ಪ್ರೆಸ್ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೃತಪಟ್ಟವರ ಸಂಖ್ಯೆಯನ್ನು, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಗುರುವಾರ ಸಂಸತ್ ಕಲಾಪದಲ್ಲಿ ತಿಳಿಸಿದ್ದಾರೆ. ಒಂದೇ ವರ್ಷದಲ್ಲಿ 47,984 ಜನರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಲೋಕಸಭೆ ಕಲಾಪದಲ್ಲಿ ಲಿಖಿತ ಮಾಹಿತಿ ನೀಡಿದ ಅವರು, 2019ರಲ್ಲಿ ಬರೋಬ್ಬರಿ 53,872 ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆಗಳ ಪರಿಸ್ಥಿತಿ, ಅತಿ ವೇಗ, ಕುಡಿದ ಚಾಲನೆ, ಡ್ರಗ್ಸ್ ಸೇವಿಸಿ ಚಾಲನೆ, ಮೊಬೈಲ್ ನಲ್ಲಿ ಮಾತನಾಡುತ್ತಾ ಸೇರಿದಂತೆ ಪ್ರಮುಖ ಕಾರಣಗಳಿಗೆ ಅಪಘಾತ ಸಂಭವಿಸಿರುವ ವಿವರ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!