ಶತಕ ಸಿಡಿಸಿದ ರೋಹಿತ

356

ಇಂಡಿಯಾ ಹಾಗೂ ಸೌಥ್ ಆಫ್ರಿಕಾ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ರೋಹಿತ ಶರ್ಮಾ ಶತಕ ಸಿಡಿಸಿದ್ದಾನೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಟೀಂ ಇಂಡಿಯಾಗೆ, ಆರಂಭಿಕ ಆಟಗಾರರಾದ ಕರ್ನಾಟಕದ ಮಯಾಂಕ ಅಗರ್ವಾಲ್ ಹಾಗೂ ರೋಹಿತ ಶರ್ಮಾ ಭರ್ಜರಿ ಓಪನಿಂಗ್ ನೀಡಿದ್ದಾರೆ.

ಮೊದಲ ದಿನದ ಮೂರನೇ ವಿರಾಮದ ಅಂತ್ಯಕ್ಕೆ 59.1 ಓವರ್ ಗಳಲ್ಲಿ 202 ರನ್ ಬಾರಿಸಲಾಗಿದೆ. ರೋಹಿತ ಶರ್ಮಾ 174 ಬೌಲ್ ಗಳಲ್ಲಿ 115 ರನ್ ಬಾರಿಸುವ ಮೂಲಕ ಟೆಸ್ಟ್ ನಲ್ಲಿ 4ನೇ ಶತಕ ದಾಖಲಿಸಿದ. ಮಯಾಂಕ ಅಗರ್ವಾಲ್ 183 ಬೌಲ್ ಗಳಲ್ಲಿ 84 ರನ್ ಬಾರಿಸುವ ಮೂಲಕ ಉತ್ತಮವಾಗಿ ಆಡ್ತಿದ್ದಾನೆ.




Leave a Reply

Your email address will not be published. Required fields are marked *

error: Content is protected !!